ಏಷ್ಯಾ ಕಪ್ 2018: ಬಿಸಿಸಿಐ ವಿರೋಧಕ್ಕಿಲ್ಲ ಮಣೆ, ಬದಲಾದ ವೇಳಾ ಪಟ್ಟಿಯಲ್ಲೂ ಟೀಂ ಇಂಡಿಯಾಗೆ ಸತತ ಪಂದ್ಯ ಆಯೋಜನೆ
ಏಷ್ಯಾಕಪ್ 2018ರ ಟೂರ್ನಿಯ ವೇಳಾಪಟ್ಟಿ ಬದಲಾಗಿದ್ದು, ಇದೇ ಸೆಪ್ಟೆಂಬರ್ 15ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್ ಮತ್ತು ಆಪ್ಘಾನಿಸ್ತಾನ ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

Published On :
ದುಬೈ: ಏಷ್ಯಾಕಪ್ 2018ರ ಟೂರ್ನಿಯ ವೇಳಾಪಟ್ಟಿ ಬದಲಾಗಿದ್ದು, ಇದೇ ಸೆಪ್ಟೆಂಬರ್ 15ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್ ಮತ್ತು ಆಪ್ಘಾನಿಸ್ತಾನ ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.
ಈ ಹಿಂದೆ ವೇಳಾಪಟ್ಟಿಯಲ್ಲಿ ಎಡವಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಾಗ್ಯೂ ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಆದರ ಕೇವಲ ಟೀಂ ಇಂಡಿಯಾ ಆಡುವ ಮೈದಾನದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯುಎಇಯಲ್ಲಿ ಏಷ್ಯಾಕಪ್ 2018ರ ಟೂರ್ನಿ ಆಯೋಜನೆಯಾಗಿದ್ದು, ಅಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮತ್ತು ಅಬುದಾಬಿಯ ಶೇಖ್ ಜಾಯೆದ್ ಕ್ರೀಡಾಂಗಣಗಳಲ್ಲಿ ಪಂದ್ಯಗಳ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದ್ದು, ಸೆಪ್ಟೆಂಬರ್ 18ರಿಂದ ಹಾಂಕಾಂಗ್ ವಿರುದ್ಧದ ಪಂದ್ಯದೊಂದಿಗೆ ಭಾರತ ಯಾತ್ರೆ ಆರಂಭವಾಗಲಿದೆ. ಆದರ ಮಾರನೆಯೇ ದಿನವೇ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಒಂದು ವೇಳೆ ಭಾರತ ಸೂಪರ್ 4 ಹಂತ ಪ್ರವೇಶ ಮಾಡಿದರೂ ಕ್ರೀಡಾಂಗಣ ಬದಲಿಸುವ ಅಗತ್ಯತೆ ಇಲ್ಲ. ಭಾರತ ಸೂಪರ್ 4 ಹಂತ ಪ್ರವೇಶ ಮಾಡಿದರೂ ದುಬೈನಲ್ಲೇ ಪಂದ್ಯವಾಡುವಂತೆ ನೂತನ ವೇಳಾಪಟ್ಟಿ ರಚನೆ ಮಾಡಲಾಗಿದೆ. ಇನ್ನು ಭಾರತ ತಂಡಕ್ಕೆ ವಿಶೇಷ ಆತಿಥ್ಯ ನೀಡಲು ಯುಎಇ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ವಿಶೇಷ ಸಿಬ್ಬಂದಿಗಳನ್ನು ನೇಮಕ ಮಾಡಿದೆ ಎನ್ನಲಾಗಿದೆ.

ವೇಳಾಪಟ್ಟಿ ವಿರೋಧಿಸಿದ್ದ ಬಿಸಿಸಿಐ
ಬಿಡುಗಡೆಯಾಗಿರುವ ವೇಳಾಪಟ್ಟಿಯಂತೆ ಪಾಕಿಸ್ತಾನ ಸೆಪ್ಟೆಂಬರ್ 16 ರಂದು ಕ್ವಾಲಿಫೈರ್ ಪಂದ್ಯ ಆಡಿ ಬಳಿಕ 19 ರಂದು ಭಾರತವನ್ನು ಎದುರಿಸಲಿದೆ. ಅಲ್ಲಿಗೆ ಪಾಕಿಸ್ತಾನಕ್ಕೆ ಮುಂದಿನ ಪಂದ್ಯಕ್ಕೆ 2 ದಿನಗಳ ಕಾಲಾವಕಾಶ ದೊರೆಯುತ್ತದೆ. ಆದರೆ ಅದೇ ಭಾರತದ ವಿಚಾರಕ್ಕೆ ಬಂದರೆ, ಭಾರತ ಸೆಪ್ಟೆಂಬರ್ 18 ರಂದು ಕ್ವಾಲಿಫೈರ್ ಪಂದ್ಯವನ್ನು ಆಡಿ ಮತ್ತೆ ಮರುದಿನವೇ ಅಂದರೆ ಸೆಪ್ಟೆಂಬರ್ 19 ಪಾಕಿಸ್ತಾನ ವಿರುದ್ಧ ಸೆಣಸಬೇಕು. ಭಾರತಕ್ಕೆ ಯಾವುದೇ ರೀತಿಯ ಕಾಲಾವಕಾಶವಿಲ್ಲ. ಹೀಗಾಗಿ ಬಿಸಿಸಿಐ ವೇಳಾಪಟ್ಟಿ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ವೇಳಾಪಟ್ಟಿ ಪರಿಷ್ಕರಿಸುವಂತೆ ಆಗ್ರಹಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತDubaiದುಬೈPakistanಪಾಕಿಸ್ತಾನVirat Kohliವಿರಾಟ್ ಕೊಹ್ಲಿBCCIಬಿಸಿಸಿಐAsia Cup 2018ಏಷ್ಯಾ ಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


