ಕ್ರಿಕೆಟ್

ಐದನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್, ಅಶ್ವಿನ್, ಪಾಂಡ್ಯ ಬದಲು ಜಡೇಜಾ, ವಿಹಾರಿ ಕಣಕ್ಕೆ

ಭಾರತ ಇಂಗ್ಲೆಂಡ್ ನಡುವಿನ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಓವಲ್ ನಲ್ಲಿ ಪ್ರಾರಂಬವಾಗಿದ್ದು ಟಾಸ್ ಗೆದ್ದಿರುವ ಅತಿಥೇಯ ಇಂಗ್ಲೆಂಡ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.

ಐದನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್, ಅಶ್ವಿನ್, ಪಾಂಡ್ಯ ಬದಲು ಜಡೇಜಾ, ವಿಹಾರಿ ಕಣಕ್ಕೆ
ಐದನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್
Published On :
ಓವಲ್(ಇಂಗ್ಲೆಂಡ್): ಭಾರತ ಇಂಗ್ಲೆಂಡ್ ನಡುವಿನ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಓವಲ್ ನಲ್ಲಿ ಪ್ರಾರಂಬವಾಗಿದ್ದು ಟಾಸ್ ಗೆದ್ದಿರುವ ಅತಿಥೇಯ ಇಂಗ್ಲೆಂಡ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಓವಲ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ  ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಜಯಿಸಿದ್ದಾರೆ.
ಇದಾಗಲೇ ಸರಣಿಯನ್ನು ತಮ್ಮದಾಗಿಸಿಕೊಂಡಿರುವ ಇಂಗ್ಲೆಂಡ್ ತಂಡದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಆದರೆ ಭಾರತ ಹನುಮಾ ವಿಹಾರಿ ಹಾಗು  ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಎರಡು ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಆರ್. ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯಬದಲಿಗೆ ಜಡೇಜಾ ಹಾಗೂ .ವಿಹಾರಿ ಆಡಲಿದ್ದಾರೆ.
ಇತ್ತೀಚೆಗೆ ನಿವೃತ್ತಿ ಗೋಷಿಸಿರುವ ಇಂಗ್ಲೆಂಡ್ ವೇಗಿ ಅಲೆಸ್ಟರ್ ಕುಕ್ ಪಾಲಿಗೆ ಇದು ಕಡೆಯ ಅಂತರಾಷ್ಟ್ರೀಯ ಪಂದ್ಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.