ಕ್ರಿಕೆಟ್

ರೋ'ಹಿಟ್' ಆಟಕ್ಕೆ ಸಚಿನ್, ಗಂಗೂಲಿ ಅವರ ದಾಖಲೆ ಸೇರಿ ಹಲವು ದಾಖಲೆಗಳು ಧೂಳಿಪಟ!

ಮುಂಬೈನಲ್ಲಿ ನಡೆದ ವಿಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 162 ರನ್ ಗಳ ಪೇರಿಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ರೋ'ಹಿಟ್' ಆಟಕ್ಕೆ ಸಚಿನ್, ಗಂಗೂಲಿ ಅವರ ದಾಖಲೆ ಸೇರಿ ಹಲವು ದಾಖಲೆಗಳು ಧೂಳಿಪಟ!
ರೋಹಿತ್ ಶರ್ಮಾ
Published On :
ಮುಂಬೈ: ಮುಂಬೈನಲ್ಲಿ ನಡೆದ ವಿಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 162 ರನ್ ಗಳ ಪೇರಿಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ನಿನ್ನೆ ರೋಹಿತ್ ಗಳಿಸಿದ 162 ರನ್ ಗಳ ಮೂಲಕ ಅವರು ತವರು ನೆಲದಲ್ಲಿ ಸತತ ಎರಡು ಬಾರಿ 150ಕ್ಕೂ ಅಧಿಕ ರನ್​ ಬಾರಿಸಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಜಿಂಬಾಬ್ವೆ ಆಟಗಾರ ಹ್ಯಾಮಿಲ್ಟನ್​ ಮಸಕಝ 2009ರಲ್ಲಿ ಕೀನ್ಯಾ ವಿರುದ್ಧ ಈ ಸಾಧನೆ ಮಾಡಿದ್ದರು.
ಇನ್ನು ಈ ಅದ್ಭುತ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಅವರ 150ಕ್ಕೂ ಅಧಿಕ ರನ್ ಗಳಿಕೆಯ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಆ ಮೂಲಕ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ಅತೀ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದು ಮಾತ್ರವಲ್ಲದೇ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ರೋಹಿತ್ ಬಳಿಕದ ಸ್ಥಾನದಲ್ಲಿ ಡೇವಿಡ್ ವಾರ್ನರ್ ಮತ್ತು ಸಚಿನ್ ತೆಂಡೂಲ್ಕರ್ ಇದ್ದು, ಇಬ್ಬರೂ ತಲಾ 5 ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬಳಿಕದ ಸ್ಥಾನದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ, ವಿಂಡೀಸ್ ಕ್ರಿಸ್ ಗೇಯ್ಲ್, ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಮತ್ತು ಭಾರತದ ವಿರಾಟ್ ಕೊಹ್ಲಿ (ತಲಾ 4 ಬಾರಿ) ಇದ್ದಾರೆ.
21ಕ್ಕೇರಿದ ಶತಕಗಳ ಸಂಖ್ಯೆ, ಕಡಿಮೆ ಇನ್ನಿಂಗ್ಸ್ ನಲ್ಲಿ ರೋಹಿತ್ ಸಾಧನೆ
ಇನ್ನು ನಿನ್ನೆಯ ಪಂದ್ಯದಲ್ಲಿ ರೋಹಿತ್ ತಮ್ಮ ವೃತ್ತಿ ಜೀವನದ 21ನೇ ಶತಕ ಸಿಡಿಸಿದ್ದು, ಈ ಮೂಲಕ ರೋಹಿತ್ ಗಂಗೂಲಿ ಮತ್ತು ಸಚಿನ್ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. 21 ಶತಕಗಳಿಗಾಗಿ ರೋಹಿತ್ ಶರ್ಮಾ ಒಟ್ಟು 186 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದು, ಇದೇ ಸಾಧನೆಗಾಗಿ ಸಚಿನ್ 200 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಗಂಗೂಲಿ 217 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇನ್ನು ಈ ಪಟ್ಟಿಯಲ್ಲಿ ಆಫ್ರಿಕಾದ ಆಟಗಾರ ಹಶೀಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದು, ಆಮ್ಸಾ 21 ಶತಕಗಳಿಗೆ ಕೇವಲ 116 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಆ ಮೂಲಕ ಅತ್ಯಂತ ಕಡಿಮೆ ಇನ್ನಿಂಗ್ಸ್ ನಲ್ಲಿ 21 ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸಿಕ್ಸರ್ ನಲ್ಲೂ ರೋ'ಹಿಟ್' ಮಿಂಚು
ಏಕದಿನದಲ್ಲಿ ಇಲ್ಲಿ ತನಕ ಭಾರತದ ಪರ ಅತೀ ಹೆಚ್ಚು ಸಿಕ್ಸರ್​ ಸಿಡಿಸಿದ ಪಟ್ಟಿಯಲ್ಲಿ ಧೋನಿ(218) ಮೊದಲ ಸ್ಥಾನದಲ್ಲಿದ್ದರೆ, 198 ಸಿಕ್ಸರ್​ಗಳೊಂದಿಗೆ ರೋಹಿತ್​ ಶರ್ಮಾ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಚಿನ್​ ತೆಂಡೂಲ್ಕರ್​(195), ಸೌರವ್​ ಗಂಗೂಲಿ(189), ಯುವರಾಜ್​ ಸಿಂಗ್​(153) ಸಿಕ್ಸ್​​ ಬಾರಿಸಿದ್ದಾರೆ. ವಿಂಡೀಸ್​ ವಿರುದ್ಧ ಏಕದಿನದಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಎರಡನೇ ಸ್ಥಾನ ಪಡೆದಿದ್ದಾರೆ. 219 ರನ್ ಬಾರಿಸಿರುವ ಸೆಹ್ವಾಗ್ ಮೊದಲ ಸ್ಥಾನದಲ್ಲಿದ್ದರೆ, ಇಂದಿನ 162 ರನ್ನಿನ ಮೂಲಕ ರೋಹಿತ್ ದ್ವಿತೀಯ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 157 ರನ್ ಬಾರಿಸಿರುವ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.