2 ಅದ್ಭುತ ರನ್‌ಔಟ್‌ಗಳು, ಕೊಹ್ಲಿ, ಕುಲದೀಪ್ ಯಾರದು ಬೆಸ್ಟ್ ಔಟ್ ಅಂತೀರಾ, ಈ ವಿಡಿಯೋ ನೋಡಿ!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಿದ್ದಿಗೆ ಬಿದ್ದಂತೆ ಒಬ್ಬರನ್ನೊಬ್ಬರು ಮೀರಿಸುವಂತೆ ಆಡುತ್ತಿದ್ದಾರೆ...

Published On :
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಿದ್ದಿಗೆ ಬಿದ್ದಂತೆ ಒಬ್ಬರನ್ನೊಬ್ಬರು ಮೀರಿಸುವಂತೆ ಆಡುತ್ತಿದ್ದಾರೆ.
ತಂಡದ ನಾಲ್ಕನೇ ಓವರ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಹೋಪ್ ಚೆಂಡನ್ನು ಮೀಡ್ ಆನ್ ನಲ್ಲಿ ಬಾರಿಸಿದರು. ಈ ವೇಳೆ ಹೋಪ್ ಒಂದು ರನ್ ಕದಿಯಲು ಮುಂದಾದರೂ ಅಷ್ಟರಲ್ಲೇ ಕುಲದೀಪ್ ಯಾದವ್ ಎಸೆದ ಚೆಂಡು ನೇರವಾಗಿ ವಿಕೆಟ್ ಗೆ ಬಡಿದಿದೆ. ಒಂದು ರನ್ ಕದಿಯುವ ಬರದಲ್ಲಿ ಹೋಪ್ ರನ್ಔಟ್ ಗೆ ಬಲಿಯಾಗಿದ್ದಾರೆ.
ಈ ಓವರ್ ನ ನಂತರದ ಓವರ್ ನಲ್ಲೇ ಮತ್ತೊಂದು ರನ್ಔಟ್ ಗೆ ಪೊವೆಲ್ ಬಲಿಯಾದರು. ಸ್ಟ್ರೇಕ್ ನಲ್ಲಿ ಆಡುತ್ತಿದ್ದ ಸ್ಯಾಮೂಯೆಲ್ಸ್ ಬುಮ್ರಾ ಎಸೆತವನ್ನು ಆಫ್ ಸೈಡ್ ನಲ್ಲಿ ಹೊಡೆದಿದ್ದಾರೆ. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಪೊವೆಲ್ ಹಾಗೂ ಸ್ಯಾಮೂಯೆಲ್ಸ್ ಒಂದು ರನ್ ಪಡೆಯಲು ಮುಂದಾದರೂ ಅಷ್ಟರಲ್ಲಿ ಚೆಂಡು ನೆರವಾಗಿ ಕೊಹ್ಲಿ ಕೈ ಸೇರಿತ್ತು. ಇದನ್ನು ಕಂಡ ಸ್ಯಾಮೂಯೆಲ್ಸ್ ಪೊವೆಲ್ ರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದರು. ಆದರೆ ಕೊಹ್ಲಿ ಅಮೋಘವಾಗಿ ಡೈವ್ ಮಾಡಿ ಚೆಂಡನ್ನು ವಿಕೆಟ್ ಎಸೆದು ರನ್ಔಟ್ ಮಾಡಿದರು.
ಒಟ್ಟಿನಲ್ಲಿ ಟೀಂ ಇಂಡಿಯಾದ ಆಟಗಾರರು ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎದುರಾಳಿ ಆಟಗಾರರು ಒಂದು ರನ್ ಪಡೆಯದಂತೆ ಫೀಲ್ಡಿಂಗ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbaiಮುಂಬೈಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿWest indiesವೆಸ್ಟ್ ಇಂಡೀಸ್Cricket Offbeatಕ್ರಿಕೆಟ್ ಸ್ವಾರಸ್ಯKuldeep Yadavಕುಲದೀಪ್ ಯಾದವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


