ಕ್ರಿಕೆಟ್

ಕುಡಿದಿಲ್ಲ, ಗಲಾಟೆ ಮಾಡಿಲ್ಲ ಆದರೂ ಮುಂಬೈ ಪೊಲೀಸ್ ಬೈಕ್ ಏರಿದ ಕ್ರಿಸ್ ಗೇಯ್ಲ್, ಅಸಲಿಗೆ ಏನಾಯ್ತು?

ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಮುಂಬೈ ಪೊಲೀಸ್ ಬೈಕ್ ಏರಿ ಪೋಸ್ ಕೊಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಕುಡಿದಿಲ್ಲ, ಗಲಾಟೆ ಮಾಡಿಲ್ಲ ಆದರೂ ಮುಂಬೈ ಪೊಲೀಸ್ ಬೈಕ್ ಏರಿದ ಕ್ರಿಸ್ ಗೇಯ್ಲ್, ಅಸಲಿಗೆ ಏನಾಯ್ತು?
ಕ್ರಿಸ್ ಗೇಯ್ಲ್
Published On :
ಮುಂಬೈ: ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಮುಂಬೈ ಪೊಲೀಸ್ ಬೈಕ್ ಏರಿ ಪೋಸ್ ಕೊಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಕ್ರಿಸ್ ಗೇಯ್ಲ್ ವೆಸ್ಟ್ ಇಂಡೀಸ್ ಬಿಟ್ಟರೆ ಹೆಚ್ಚಿನ ಸಮಯವನ್ನು ಭಾರತದಲ್ಲೇ ಕಳೆಯುತ್ತಾರೆ. ಇನ್ನು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುವ ಕ್ರಿಸ್ ಗೇಯ್ಲ್ ಭಾರತದ ಮೇಲೆ ಹೆಚ್ಚಿನ ವ್ಯಾಮೋಹವಿದೆ. 
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಯ್ಲ್ ಆಡುತ್ತಿಲ್ಲ. ಆದರೆ ಅವರು ಮುಂಬೈಗೆ ಭೇಟಿ ಕೊಟ್ಟಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಗ್ರೇಟ್ ಫುಲ್, ಥ್ಯಾಂಕ್ ಫುಲ್, ಐ ಲವ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. 
ಮುಂಬೈ ಪೊಲೀಸರ ಬೈಕ್ ಮೇಲೆ ಕುಳಿತು ಕ್ರಿಸ್ ಗೇಯ್ಲ್ ಪೋಸ್ ಕೊಟ್ಟಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.