ಕ್ರಿಕೆಟ್

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ...

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!
ಎಂಎಸ್ ಧೋನಿ-ವಿರಾಟ್ ಕೊಹ್ಲಿ
Published On :
ವಿಶಾಖಪಟ್ಟಣಂ: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ.
ಹೌದು.. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಎಂಎಸ್ ಧೋನಿ ಆಡುತ್ತಿದ್ದರು. ಈ ವೇಳೆ ಸ್ಯಾಮೂವೆಲ್ಸ್ ಬೌಲಿಂಗ್ ನಲ್ಲಿ ಧೋನಿ ಹೆಲಿಕಾಫ್ಟರ್ ಶಾಟ್ ಹೊಡೆದರು. ಇನ್ನು ನಾನ್ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಧೋನಿಯ ಹೆಲಿಕಾಫ್ಟರ್ ಶಾಟ್ ಕಂಡು ದಂಗಾದರು. 
ಎಂಎಸ್ ಧೋನಿ ತಮ್ಮ ಹಿಂದಿನ ಬ್ಯಾಟಿಂಗ್ ಶೈಲಿಯನ್ನು ಕಳೆದುಕೊಂಡಿದ್ದಾರೆ. ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಳ್ಳಲು ತಿಣುಕಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು. 
ಎರಡನೇ ಏಕದಿನ ಪಂದ್ಯ ಟೈ ಆಗಿದ್ದು ಟೀಂ ಇಂಡಿಯಾ ನೀಡಿದ 321 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 321 ರನ್ ಬಾರಿಸಿದ್ದು ಪಂದ್ಯ ರೋಚಕ ಟೈ ಆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.