ಕ್ರಿಕೆಟ್

ಬೌಂಡರಿ ಹೊರಗೆ ಅದ್ಭುತ ಕ್ಯಾಚ್, ರಿಷಭ್ ಪಂತ್‌ಗೆ ಗಂಭೀರ ಗಾಯ, ರೋಚಕ ವಿಡಿಯೋ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ...

ಬೌಂಡರಿ ಹೊರಗೆ ಅದ್ಭುತ ಕ್ಯಾಚ್, ರಿಷಭ್ ಪಂತ್‌ಗೆ ಗಂಭೀರ ಗಾಯ, ರೋಚಕ ವಿಡಿಯೋ!
ರಿಷಭ್ ಪಂತ್
Published On :
ವಿಶಾಖಪಟ್ಟಣಂ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. 
ಇನ್ನು ಪಂದ್ಯದಲ್ಲಿ ರಿಷಭ್ ಪಂತ್ ಬೌಂಡರಿ ಗೆರೆಯಲ್ಲಿ ಕ್ಯಾಚ್ ಹಿಡಿಯಲು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಯಜುವೇಂದ್ರ ಚಹಾಲ್ ಎಸೆತವನ್ನು ವೆಸ್ಟ್ ಇಂಡೀಸ್ ತಂಡ ಬ್ಯಾಟ್ಸ್ ಮನ್ ಪೊವೆಲ್ ಸಿಕ್ಸರ್ ಸಿಡಿಸಿದರು. ಕ್ಯಾಚ್ ಹಿಡಬೇಕು ಅನ್ನುವ ದಾವಾಂತದಲ್ಲಿ ಪಂತ್ ಬೌಂಡರಿ ಗೆರೆಯನ್ನು ದಾಟಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಆದರೆ ನಿಯಂತ್ರಣ ಸಿಗದೇ ತದೆ ಗೋಡೆಗೆ ಗುದ್ದಿಕೊಂಡು ಎಡಗೈಗೆ ಗಂಭೀರ ಗಾಯ ಮಾಡಿಕೊಂಡರು. 
ಬೌಂಡರಿ ಹೊರಗೆ ಕ್ಯಾಚ್ ಹಿಡಿದಿದ್ದರಿಂದ ಅಂಪೈರ್ ಸಿಕ್ಸರ್ ಎಂದು ಘೋಷಿಸಿದರು. ಆದರೆ ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್ ಚಿಕಿತ್ಸೆಗಾಗಿ ಮೈದಾನದಿಂದ ಹೊರಬಂದರು. 
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 321 ರನ್ ಬಾರಿಸಿದ್ದರು. 322 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು ಆರು ರನ್ ಗಳ ಅಗತ್ಯವಿತ್ತು. ಈ ವೇಳೆ ಹೋಪ್ ಚೆಂಡನ್ನು ಬೌಂಡರಿ ಸಿಡಿಸಿದ್ದು ಪಂದ್ಯವನ್ನು ಟೈನಲ್ಲಿ ಅಂತ್ಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.