ಕ್ರಿಕೆಟ್

ನೀನು ಬಿಹಾರಿಗ, ನಿನಗೆ ಮಹಾರಾಷ್ಟ್ರದಲ್ಲಿ ಜಾಗವಿಲ್ಲ, ಪೃಥ್ವಿ ಶಾಗೆ ಕ್ರಿಕೆಟ್ ಆಡದಂತೆ ಬೆದರಿಕೆ!

ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿ...

ನೀನು ಬಿಹಾರಿಗ, ನಿನಗೆ ಮಹಾರಾಷ್ಟ್ರದಲ್ಲಿ ಜಾಗವಿಲ್ಲ, ಪೃಥ್ವಿ ಶಾಗೆ ಕ್ರಿಕೆಟ್ ಆಡದಂತೆ ಬೆದರಿಕೆ!
ಪೃಥ್ವಿ ಶಾ
Published On :
ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿ ನಾನು ಭವಿಷ್ಯದ ಭರವಸೆಯ ಆಟಗಾರ ಎಂದು ಸಾಬೀತುಪಡಿಸಿದ್ದರು. 
ಈ ಮಧ್ಯೆ ಮಹಾರಾಷ್ಟ್ರದ ರಾಜಕೀಯ ಸಂಘಟನೆ ಆಗಿರುವ ಮಹಾರಾಷ್ಟ್ರ ನವ ನಿರ್ಮಾಣ್ ಸೇನೆ(ಎಂಎನ್ಎಸ್) ಪೃಥ್ವಿ ಶಾಗೆ ಕ್ರಿಕೆಟ್ ಆಡದಂತೆ ಬೆದರಿಕೆ ಹಾಕಿದೆ. ಕಾರಣ ಪೃಥ್ವಿ ಶಾ ಮೂಲತ ಬಿಹಾರದ ಮನ್ಪುರದವನು. ಆದರೆ ಆತ ಮಹಾರಾಷ್ಟ್ರದಲ್ಲಿ ಕ್ರಿಕೆಟ್ ತರಬೇತಿ ಪಡೆದಿದ್ದು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಾನ ಪಡೆದ ಕೂಡಲೇ ತಾನು ಬಿಹಾರದವನು ಎಂದು ಹೇಳಿರುವುದು ಎಂಎನ್ಎಸ್ ಅನ್ನು ಕೆರಳಿಸಿದೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಲು ಅವಕಾಶ ಸಿಕ್ಕ ಕೂಡಲೇ ನೀವು ಬಿಹಾರದವರೆಂದು ಯಾಕೆ ಹೇಳಿದ್ದೀರಾ? ಹಾಗಾಗಿ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ನಿಮಗೆ ಉಳಿಯಲು ಅನುಮತಿ ಇಲ್ಲ ಎಂದಿದ್ದಾರೆ. ಜೊತೆಗೆ ಕ್ರಿಕೆಟ್ ಆಡದಂತೆ ಪೃಥ್ವಿಗೆ ಹಾಗೂ ಅವರ ಕುಟುಂಬಕ್ಕೆ ಎಂಎನ್ಎಸ್ ಬೆದರಿಕೆ ಹಾಕಿದೆ ಎಂದು ಬಿಹಾರದ ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.