ಪಾಕ್‌ನ ಕಟ್ಟಾ ಅಭಿಮಾನಿ ಟೀಂ ಇಂಡಿಯಾ ಜೆರ್ಸಿ ತೊಟ್ಟ ಫೋಟೋ ವೈರಲ್!, ಇದರ ಹಿಂದಿದೆ ಎಂಎಸ್ ಧೋನಿ ಜಪ!
ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯೊಬ್ಬರು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಪಾಕ್ ಕಟ್ಟಾ ಅಭಿಮಾನಿ ಬಶೀರ್...

Published On :
ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯೊಬ್ಬರು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಪಾಕ್ ಕಟ್ಟಾ ಅಭಿಮಾನಿ ಬಶೀರ್ ಚಾಚಾ ಅವರು ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದ ಕಾರಣ ಬಹಿರಂಗವಾಗಿದೆ.
ಬಾಂಗ್ಲಾದೇಶದ ವಿರುದ್ಧದ ಏಷ್ಯಾಕಪ್ ಫೈನಲ್ ನಲ್ಲಿ ಪಾಕ್ ಅಭಿಮಾನಿ ಬಶೀರ್ ಟೀಂ ಇಂಡಿಯಾದ ಜೆರ್ಸಿ ತೊಟ್ಟು ರೋಹಿತ್ ಶರ್ಮಾ ಪಡೆಯನ್ನು ಬೆಂಬಲಿಸಿದ್ದರು. ಅಸಲಿಗೆ ಚಾಚಾ ಟೀಂ ಇಂಡಿಯಾ ಜೆರ್ಸಿ ತೊಡಲು ಕಾರಣವಾಗಿದ್ದು ಎಂಎಸ್ ಧೋನಿ.
ಏಷ್ಯಾ ಕಪ್ ಫೈನಲ್ ಗೂ ಮೊದಲು ಧೋನಿ ಬಶೀರ್ ಚಾಚಾ ಹೋಟೆಲ್ ಕೊಠಡಿಗೆ ತೆರಳಿ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ಕೊಟ್ಟು ನಾಳಿನ ಪಂದ್ಯದಲ್ಲಿ ಇದನ್ನೇ ತೊಡುವಂತೆ ಹೇಳಿದ್ದರಂತೆ. ಅದೇ ಕಾರಣಕ್ಕೆ ಪಾಕ್ ಅಪ್ಪಟ ಅಭಿಮಾನಿ ಭಾರತೀಯ ಜೆರ್ಸಿಯಲ್ಲಿ ಮಿಂಚಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನMS Dhoniಎಂಎಸ್ ಧೋನಿAsia Cup 2018ಏಷ್ಯಾ ಕಪ್ 2018Bashir ChachaIndia jerseyಬಶೀರ್ ಚಾಚಾಭಾರತ ಜೆರ್ಸಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


