ಅದು ಕುಂಬ್ಳೆ ವಿದಾಯ ಪಂದ್ಯ; ತಂಡದ ಬಸ್ ಅನ್ನು ಸ್ವತಃ ಎಂಎಸ್ ಧೋನಿ ಡ್ರೈವ್ ಮಾಡಿದ್ದರು: ವಿವಿಎಸ್ ಲಕ್ಷ್ಮಣ್
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಆತ್ಮಕಥೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ...

Published On :
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಆತ್ಮಕಥೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಎಂಎಸ್ ಧೋನಿ ಟೀಂ ಇಂಡಿಯಾ ಆಟಗಾರರಿದ್ದ ಬಸ್ ಅನ್ನು ಸ್ವತಃ ತಾವೇ ಡ್ರೈವ್ ಮಾಡಿ ಕ್ರೀಡಾಂಗಣದಿಂದ ಹೋಟೆಲ್ ವರೆಗೂ ಕರೆದೊಯ್ದಿದ್ದರು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಲಕ್ಷ್ಮಣ್ ತಮ್ಮ ಆತ್ಮಕತೆ 281 ಆ್ಯಂಡ್ ಬಿಯಾಂಡ್ ನಲ್ಲಿ ಧೋನಿಯ ತಾಳ್ಮೆ, ಧೈರ್ಯ ಹಾಗೂ ಚತುರತೆಯ ಕುರಿತು ಹೊಗಳಿದ್ದು 2008ರಲ್ಲಿ ನಡೆದಿದ್ದ ಘಟನೆಯೊಂದನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟಿದ್ದಾರೆ.
ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಗೆ ವಿದಾಯ ಹೇಳಿದ ಕೊನೆಯ ಪಂದ್ಯ ಅದಾಗಿತ್ತು. ಅಲ್ಲದೆ ಅದು ನನ್ನ 100ನೇ ಟೆಸ್ಟ್ ಪಂದ್ಯ ಸಹ ಆಗಿತ್ತು. ಈ ವೇಳೆ ಮೈದಾನದಿಂದ ಹೊರ ಬಂದ ನಾವು ಟೀಂ ಇಂಡಿಯಾ ಬಸ್ ನಲ್ಲಿ ಕುಳಿತಿದ್ದೇವು. ಆಗ ಧೋನಿ ಬಸ್ ಅನ್ನು ಡ್ರೈವ್ ಮಾಡಿ ಹೋಟೆಲ್ ವರೆಗೂ ಕರೆದೊಯ್ದಿದ್ದರು. ಇದು ನನಗೆ ಮರೆಯಲಾಗದ ಕ್ಷಣ ಎಂದು ಆತ್ಮಕತೆಯಲ್ಲಿ ಲಕ್ಷ್ಮಣ್ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಎಂಎಸ್ ಧೋನಿವಿವಿಎಸ್ ಲಕ್ಷ್ಮಣ್VVS LaxmanCricket Offbeatಕ್ರಿಕೆಟ್ ಸ್ವಾರಸ್ಯ281 and beyond281 ಅಂಡ್ ಬಿಯಾಂಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


