ಎಂಎಸ್ ಧೋನಿ ಕಂಡು ಅಂಗವಿಕಲ ಅಭಿಮಾನಿ ಕಣ್ಣಾಲೆಯಲ್ಲಿ ನೀರು, ಮರೆಯಲಾಗದ ಗಿಫ್ಟ್ ನೀಡಿದ ಧೋನಿ, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಧೋನಿ ತಮ್ಮ...

Published On :
ತಿರುವನಂತಪುರಂ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಧೋನಿ ತಮ್ಮ ಅಭಿಮಾನಿಗಳನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎಂಬುದಕ್ಕೆ ತಿರುವನಂತಪುರಂ ಕ್ರೀಡಾಂಗಣದ ಹೊರಗೆ ನಡೆದ ಘಟನೆ ಸಾಕ್ಷಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಧೋನಿ ಅಂಗವಿಕಲ ಅಭಿಮಾನಿಯನ್ನು ಕಾಣಲು ಸ್ವತಃ ಕ್ರೀಡಾಂಗಣದ ಹೊರಕ್ಕೆ ತೆರಳಿ ಅಚ್ಚರಿ ಮೂಡಿಸಿದ್ದರು. ಪಂದ್ಯ ಮುಗಿದ ಬಳಿಕ ತಮ್ಮ ಅಭಿಮಾನಿಯೊಬ್ಬರು ಕ್ರೀಡಾಂಗಣದ ಹೊರ ಬಾಗದಲ್ಲಿ ಕಾಯುತ್ತಿದ್ದ ವಿಷಯ ತಿಳಿದ ಧೋನಿ ಅವರ ಬಳಿ ತೆರಳಿದರು. ಅಲ್ಲಿ ವೀಲ್ ಚೇರ್ ನಲ್ಲಿ ಕುಳಿತಿದ್ದ ಪುಟ್ಟ ಅಭಿಮಾನಿ ಧೋನಿ ಆಗಮನವನ್ನು ಗಮನಿಸಿ ಅಚ್ಚರಿಗೊಂಡಿದ್ದರು.
ತಮ್ಮ ಹತ್ತಿರಕ್ಕೆ ಬಂಧ ಧೋನಿ ಪುಟ್ಟ ಅಭಿಮಾನಿ ಕೈಗೆ ಮುತ್ತು ನೀಡಲು ಕೇಳುತ್ತಾರೆ. ಕ್ಷಣ ಮಾತ್ರ ಏನೂ ಯೋಚಿಸದ ಧೋನಿ ಮುತ್ತು ಪಡೆಯುತ್ತಾರೆ. ಬಳಿಕ ಅಭಿಮಾನಿಯೊಂದಿಗೆ ಕೆಲ ಸಮಯ ಮಾತನಾಡಿದ ಧೋನಿ ಫೋಟೋಗೆ ಫೋಸ್ ನೀಡಿ, ಆಟೋಗ್ರಾಫ್ ನೀಡಿ ತೆರಳಿದ್ದಾರೆ. ಇದನ್ನು ಮತ್ತೊಮ್ಮ ಅಭಿಮಾನಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಧೋನಿ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaMS DhoniFanಅಭಿಮಾನಿಎಂಎಸ್ ಧೋನಿWest indiesವೆಸ್ಟ್ ಇಂಡೀಸ್Cricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


