ಯುವ ಆಟಗಾರ ರಿಷಬ್ ಪಂತ್ ಗೆ ಅವಕಾಶ ನೀಡಲು ಧೋನಿ ಟಿ-20 ಯಿಂದ ಹಿಂದೆ ಸರಿದರು: ವಿರಾಟ್ ಕೊಹ್ಲಿ
ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರ ರಿಷಬ್ ಪಂತ್ ಗೆ ದಾರಿ ಮಾಡಿಕೊಡಲು ಮುಂಬರುವ ಟಿ-20 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ತಿರುವನಂತಪುರ : ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಏಕದಿನ ಪಂದ್ಯದ ಭಾಗವಾಗಿದ್ದು, ಯುವ ಆಟಗಾರ ರಿಷಬ್ ಪಂತ್ ಗೆ ದಾರಿ ಮಾಡಿಕೊಡಲು ಮುಂಬರುವ ಟಿ-20 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಹ್ಲಿ, ಈಗಲೂ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಆದರೆ. ಟಿ-20 ಮಾದರಿಯ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರದಿಂದ ರಿಷಬ್ ಪಂತ್ ಅಂತಹ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಮುಂಬರುವ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯಗಳಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಡಲಾಗಿದೆ. ಮುಂದೆಯೂ ಕೂಡಾ ಈ ಮಾದರಿಯ ಪಂದ್ಯಗಳಲ್ಲಿ ಧೋನಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ನಂಬರ್ 4ರ ಸ್ಥಾನದಲ್ಲಿ ಅಂಬಾಟಿ ರಾಯುಡು ಉತ್ತಮ ಪ್ರದರ್ಶನ ಹಾಗೂ ಯುವ ಆಟಗಾರ ಖಲೀಲ್ ಅಹ್ಮದ್ ಬೌಲಿಂಗ್ ಗೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ 3-1 ಅಂತರದಿಂದ ಸರಣಿ ಗೆದ್ದಿರುವುದು ಸಕಾರಾತ್ಮಕ ಮನೋಭಾವ ಮೂಡಿಸಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


