'ವಯಸ್ಸಲ್ಲ, ಫಿಟ್ನೆಸ್ ಮುಖ್ಯ', 3ರನ್ ಓಡುವ ಸ್ಪರ್ಧೆಯಲ್ಲಿ ಬ್ರಾವೋ ಮಣಿಸಿದ 'ತಲಾ ಧೋನಿ'
ಕ್ರಿಕೆಟ್ ಗೆ ವಯಸ್ಸಲ್ಲ, ಫಿಟ್ನೆಸ್ ಮುಖ್ಯ ಎಂದು ಹೇಳಿದ್ದ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಅದನ್ನು ಕೇವಲ ಹೇಳಿದ್ದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸಿದ್ದಾರೆ.

Published On :
ಮುಂಬೈ: ಕ್ರಿಕೆಟ್ ಗೆ ವಯಸ್ಸಲ್ಲ, ಫಿಟ್ನೆಸ್ ಮುಖ್ಯ ಎಂದು ಹೇಳಿದ್ದ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಅದನ್ನು ಕೇವಲ ಹೇಳಿದ್ದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸಿದ್ದಾರೆ.
ಹೌದು...ತಮ್ಮ ನಿವೃತ್ತಿ ಕುರಿತು ಮಾತನಾಡುತ್ತಿರುವ ಟೀಕಾಕಾರರಿಗೆ ತಿರುಗೇಟು ನೀಡಿರುವ ಧೋನಿ, ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದಗ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ತರಬೇತಿ ವೇಳೆ ಧೋನಿ ಮತ್ತು ಬ್ರಾವೋ 3ರನ್ ಓಡುವ ಸ್ಪರ್ಧೆ ನಡೆಸಿದ್ದಾರೆ. ಇವರಿಬ್ಬರ ನಡುವಿನ ಪೈಪೋಟಿಯಲ್ಲಿ 'ತಲಾ ಧೋನಿ' ಗೆಲುವು ಸಾಧಿಸಿದ್ದಾರೆ.
ಬ್ರಾವೋಗಿಂತಲೂ ವೇಗವಾಗಿ ಮೂರು ರನ್ ಗಳಿಸಿದ ಧೋನಿ ಕೆಲವೇ ಮಿಲಿ ಸೆಕೆಂಡ್ ಗಳ ಅಂತರದಲ್ಲಿ ಬ್ರಾವೋ ಅವರನ್ನು ಮಣಿಸಿದ್ದಾರೆ. ಈ ಸ್ಪರ್ಧೆ ಫ್ರೆಂಡ್ಲಿ ಆದರೂ ಧೋನಿ ಮಾತ್ರ ತಮ್ಮ ವಿರುದ್ಧ ಟೀಕಾಕಾರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇನ್ನು ಧೋನಿ ಮತ್ತು ಬ್ರಾವೋ ನಡುವಿನ ಈ ಸ್ಪರ್ಧೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಪತಃ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆ ಈ ವಿಡಿಯೋವನ್ನು ಅಪ್ಲೋಡ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈMS Dhoniಎಂಎಸ್ ಧೋನಿCricket Offbeatಕ್ರಿಕೆಟ್ ಸ್ವಾರಸ್ಯIPL 2018ಐಪಿಎಲ್ 2018ThreeRunDash3 ರನ್ ಓಟದ ಸ್ಪರ್ಧೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


