ಕ್ರಿಕೆಟ್

ಐಪಿಎಲ್ 2018: ರಶೀದ್‌ ಖಾನ್ ಆಲ್‌ರೌಂಡ್‌ ಆಟ, ಕೆಕೆಆರ್ ಸೋಲಿಸಿ ಹೈದರಾಬಾದ್ ಫೈನಲ್ ಗೆ ಲಗ್ಗೆ

ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ-20 ಕ್ರಿಕೆಟ್‌ ಅಂತಿಮ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ನ್ನು 13 ರನ್ ಗಳಿಂದ...

ಐಪಿಎಲ್ 2018: ರಶೀದ್‌ ಖಾನ್ ಆಲ್‌ರೌಂಡ್‌ ಆಟ, ಕೆಕೆಆರ್ ಸೋಲಿಸಿ ಹೈದರಾಬಾದ್ ಫೈನಲ್ ಗೆ ಲಗ್ಗೆ
ಐಪಿಎಲ್ 2018: ರಶೀದ್‌ ಖಾನ್ ಆಲ್‌ರೌಂಡ್‌ ಆಟ, ಕೆಕೆಆರ್ ಸೋಲಿಸಿ ಹೈದರಾಬಾದ್ ಫೈನಲ್ ಗೆ ಲಗ್ಗೆ
Published On :
ಕೋಲ್ಕತ್ತಾ: ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ-20 ಕ್ರಿಕೆಟ್‌ ಅಂತಿಮ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ನ್ನು 13 ರನ್ ಗಳಿಂದ ಮಣಿಸಿದ  ಸನ್‌ ರೈಸರ್ಸ್‌ ಹೈದರಾಬಾದ್‌ ಪ್ರಸಕ್ತ ಸಾಲಿನ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ.
ರಶೀದ್​ ಖಾನ್​ ಅವರ ಆಲ್ ರೌಂಡ್ ಆಟದ ನೆರವಿನಿಂದ ಹೈದರಾಬಾದ್ ಗೆ ಜಯ ದೊರಕಿದೆ. 
ಟಾಸ್​ ಸೋತು ಇನಿಂಗ್ಸ್​ ಆರಂಭಿಸಿದ ಹೈದರಾಬಾದ್ ಶಿಖರ್​ ಧವನ್​ (34) ಮತ್ತು ವೃದ್ಧಿಮಾನ್​ ಸಾಹಾ (35) ರಶೀದ್​ ಖಾನ್​ ( 10 ಎಸೆತಗಳಲ್ಲಿ 34 ರನ್​) ನೆರವಿನೊಡನೆ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 174 ರನ್​ ಪೇರಿಸಿತು.
ಕೋಲತ್ತಾ ಪರವಾಗಿ ಕುಲದೀಪ್ ಯಾದವ್ 2, ಶಿವಂ ಮಾವಿ, ಸುನಿಲ್ ನರೈನ್, ಪಿಯುಶ್ ಚಾವ್ಲಾ ತಲಾ 1 ವಿಕೆಟ್ ಕಿತ್ತರು.
ಸವಾಲಿನ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಕೋಲ್ಕತ ಪರ ಆರಂಭಿಕ ಆಟಗಾರರಾದ ಕ್ರಿಸ್​ ಲ್ಯಾನ್​ 48 ಮತ್ತು ಸುನಿಲ್​ ನರೈನ್ 26 ನಿತಿನ್​ ರಾಣಾ 22 ಮತ್ತು ಶುಭಮಾನ್​ ಗಿಲ್​ 30 ರನ್ ಗಳಿಸಿದರು. ಇನ್ನು ನಾಯಕ ದಿನೇಶ್ ಕಾರ್ತಿಕ್ ಸೇರಿ ಉಳಿದ ಆಟಗಾರರು ಉತ್ತಮ ರನ್ ಕಲೆಹಾಕುವಲ್ಲಿ ವಿಫಲರಾದರು.
ಹೈದರಾಬಾದ್ ಪರವಾಗಿ ರಶೀದ್​ ಖಾನ್ 3, ಬ್ರಾಥ್​ ವೇಟ್2 ಮತ್ತು ಸಿದ್ಧಾರ್ಥ್​ ಕೌಲ್ ವಿಕೆಟ್​ ಪಡೆದು ಮಿಂಚಿದರು.
ಭಾನುವಾರ ಮುಂಬೈನಲ್ಲಿ ನಡೆವ ಫೈನಲ್ಸ್ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಇದಾಗಲೇ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ನ್ನು ಎದುರಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.