ಐಪಿಎಲ್‌ನಿಂದ ಆರ್‌ಸಿಬಿಯನ್ನು ಹೊರದಬ್ಬಿದ ಕನ್ನಡಿಗರು!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಆಟ ಅಂತ್ಯ ಕಂಡಿದೆ. ಆರ್‌ಸಿಬಿ ಫ್ಲೇ ಆಫ್ ಕನಸು ನುಚ್ಚುನೂರಾಗಿದೆ...

Published On :
ಜೈಪುರ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಆಟ ಅಂತ್ಯ ಕಂಡಿದೆ. ಆರ್‌ಸಿಬಿ ಫ್ಲೇ ಆಫ್ ಕನಸು ನುಚ್ಚುನೂರಾಗಿದೆ.
ಕನ್ನಡಿಗ ಆಟಗಾರರನ್ನೇ ಈ ಸಲ ಕಣಕ್ಕಿಳಿಸದಿರುವ ಆರ್‌ಸಿಬಿ ಆಟಗಾರರಿಗೆ ಕನ್ನಡಿಗರಿಂದಲೇ ತುಂಬಿದ್ದ ರಾಜಸ್ತಾನ ತಂಡ ಶಾಕ್ ನೀಡಿದ್ದು ವಿಶೇಷ. ಈ ಗೆಲುವಿನೊಂದಿಗೆ ರಾಜಸ್ತಾನ ತಂಡ ಪ್ಲೇ ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ಆರ್‌ಸಿಬಿ ಮತ್ತು ರಾಜಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯದಲ್ಲಿ ಎರಡೂ ತಂಡಗಳಿಗೂ ಕೂಡ ಗೆಲುವು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ 30 ರನ್ ಗಳಿಂದ ಗೆಲುವು ಸಾಧಿಸಿದೆ.
ರಾಜಸ್ತಾನ ತಂಡದ ಶ್ರೇಯಸ್, ಗೌತಮ್ ದಾಳಿಗೆ ಆರ್‌ಸಿಬಿ ತಂಡ ಹೊರಬಿದ್ದಿದೆ. ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಗೌತಮ್ ಬೌಲ್ಡ್ ಮಾಡಿದರು. ನಂತರ ಶ್ರೇಯಸ್ ಪಾರ್ಥಿವ್ ಪಟೇಲ್, ಮೋಹಿನ್ ಅಲಿ, ಮನ್ ದೀಪ್ ಸಿಂಗ್ ವಿಕೆಟ್ ಪಡೆದು ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ 53 ರನ್ ಗಳಿಸಿದ್ದ ಎಬಿಡಿ ವಿಲಿಯರ್ಸ್ ವಿಕೆಟ್ ಅನ್ನು ಪಡೆಯುವ ಮೂಲಕ ಆರ್‌ಸಿಬಿಗೆ ಸೋಲು ಖಚಿತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Royal Challengers BangaloreRajasthan Royalsರಾಯಲ್ ಚಾಲೆಂಜರ್ಸ್ ಬೆಂಗಳೂರುರಾಜಸ್ಥಾನ್ ರಾಯಲ್ಸ್IPL 2018ಐಪಿಎಲ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


