ಬ್ಯಾನ್ ಕ್ರಾಫ್ಟ್ ಜಾಗದಲ್ಲಿ ನಾನು ಇದ್ದಿದ್ದರು ಚೆಂಡು ವಿರೂಪ ಮಾಡುತ್ತಿದ್ದೆ: ಹೊಸ ಕೋಚ್ ಜಸ್ಟಿನ್ ಲ್ಯಾಂಗರ್
ಆಸ್ಟ್ರೇಲಿಯಾದ ನೂತನ ಕೋಚ್ ಜಸ್ಟಿನ್ ಲ್ಯಾಂಗರ್ ತಾವು ಕ್ಯಾಮೆರಾನ್ ಬ್ರಾನ್ ಕ್ರಾಫ್ಟ್ ಜಾಗದಲ್ಲಿದ್ದರೆ ನಾನೂ ಕೂಡ ಚೆಂಡು ವಿರೂಪ ಮಾಡುತ್ತಿದ್ದೆ ಎಂದು ಹೇಳಿದ್ದಾರೆ...

Published On :
ಸಿಡ್ನಿ: ಆಸ್ಟ್ರೇಲಿಯಾದ ನೂತನ ಕೋಚ್ ಜಸ್ಟಿನ್ ಲ್ಯಾಂಗರ್ ತಾವು ಕ್ಯಾಮೆರಾನ್ ಬ್ರಾನ್ ಕ್ರಾಫ್ಟ್ ಜಾಗದಲ್ಲಿದ್ದರೆ ನಾನೂ ಕೂಡ ಚೆಂಡು ವಿರೂಪ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಬ್ಯಾನ್ ಕ್ರಾಫ್ ಪರಿಸ್ಥಿತಿಯ ಬಲಿಪಶು ಎಂದು ಸೂಚ್ಯವಾಗಿ ಹೇಳಿದ್ದಾರೆ.
ನಾನು ಕ್ರಿಕೆಟ್ ಪ್ರವೇಶಿಸಿದ್ದಾಗ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಅಲನ್ ಬಾರ್ಡರ್ ಚೆಂಡು ವಿರೂಪ ಮಾಡುವಂತೆ ಹೇಳಿದ್ದರೆ ಮಾಡದೇ ಇರುವಷ್ಟು ಧೈರ್ಯ ನನಗಿರಲಿಲ್ಲ. ವ್ಯತ್ಯಾಸವೇನೆಂದರೆ ಆಗ ಬಾರ್ಡರ್ ನನಗೆ ಹಾಗೆ ಹೇಳಲು ಸಾಧ್ಯವೇ ಇರಲಿಲ್ಲ. ಒಂದು ವೇಳೆ ಮಾಡಿದ್ದರೆ ಅಂದಿನ ತರುಬೇತುದಾರ ಬಾಬ್ ಸಿಂಪ್ಸನ್ ನನ್ನನ್ನು ಕೊಂದೇ ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮೆರಾನ್ ಬ್ಯಾನ್ ಕ್ರಾಫ್ ಚೆಂಡೂ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದರು. ಈ ಪ್ರಕರಣದಲ್ಲಿ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಲೆ ದಂಡವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


