ಕ್ರಿಕೆಟ್

ನೈಜ ಅಪರಾಧ ವಿಭಾಗದಲ್ಲಿ ಸ್ಟೀವ್ ಸ್ಮಿತ್ ಆತ್ಮಚರಿತ್ರೆ ಪುಸ್ತಕ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಕುಖ್ಯಾತಿಗೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಈಗ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ. ಚೆಂಡು ವಿರೂಪಗೊಳಿಸಿದ್ದಕ್ಕಷ್ಟೇ

ನೈಜ ಅಪರಾಧ ವಿಭಾಗದಲ್ಲಿ ಸ್ಟೀವ್ ಸ್ಮಿತ್ ಆತ್ಮಚರಿತ್ರೆ ಪುಸ್ತಕ!
ಸ್ಟೀವ್ ಸ್ಮಿತ್
Published On :
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಕುಖ್ಯಾತಿಗೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಈಗ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ. ಚೆಂಡು ವಿರೂಪಗೊಳಿಸಿದ್ದಕ್ಕಷ್ಟೇ ಅಲ್ಲದೇ ಮತ್ತೊಂದು ವಿಷಯಕ್ಕೆ ಚರ್ಚೆಯಾಗುತ್ತಿದ್ದಾರೆ. 
ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರ  ಆತ್ಮಚರಿತ್ರೆ  "ದಿ ಜರ್ನಿ ಸ್ಟೀವ್ ಸ್ಮಿತ್" ಪುಸ್ತಕವನ್ನು ಡೈಮಾಕ್ಸ್ ಬ್ರಿಸ್ಬೇನ್ ಪುಸ್ತಕ ಮಳಿಗೆ ಆತ್ಮಚರಿತ್ರೆ ವಿಭಾಗದ ಬದಲು ನೈಜ ಅಪರಾಧ ವಿಭಾಗದಲ್ಲಿಟ್ಟು ಮಾರಾಟ ಮಾಡಿದೆ. 
ಸ್ಟೀವ್ ಸ್ಮಿತ್ ಸಹಿ ಮಾಡಿರುವ ಪುಸ್ತಕವನ್ನು ಡೈಮಾಕ್ಸ್ ಬ್ರಿಸ್ಬೇನ್ ಪುಸ್ತಕ ಮಳಿಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ನೆಟಿಜನ್ ಗಳು  ನೈಜ ಅಪರಾಧ ವಿಭಾಗದಲ್ಲಿ ಸ್ಟೀವ್ ಸ್ಮಿತ್ ಆತ್ಮಚರಿತ್ರೆ ಪುಸ್ತಕದ ಚಿತ್ರವನ್ನು ಹೆಚ್ಚು ಹಂಚಿಕೆ ಮಾಡಿಕೊಂಡು ಹಾಸ್ಯ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಕ್ಲಿಯರೆನ್ಸ್ ಸೇಲ್ ವಿಭಾಗದಲ್ಲಿಯೂ ಸ್ಮಿತ್ ಆತ್ಮಚರಿತ್ರೆ ಪುಸ್ತಕ ಕಾಣಿಸಿಕೊಂದಿದ್ದು, 24 ಡಾಲರ್ ಮೊತ್ತದಿಂದ 2 ಡಾಲರ್ ಗೆ ಬೆಲೆ ಇಳಿಕೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.