ಕ್ರಿಕೆಟ್

ಐಪಿಎಲ್ ಟೂರ್ನಿ ವೇಳೆ 50 ಭಾರತೀಯ ಆಟಗಾರರ 'ಒತ್ತಡ ನಿರ್ವಹಣೆ' ಮೇಲೆ ಕಣ್ಣಿಡಲಿರುವ ಬಿಸಿಸಿಐ

ಐಪಿಎಲ್ ಟೂರ್ನಿಗೆ ಕೇವಲ ಆರು ದಿನಗಳು ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟಿಗರ ಮೇಲೆ ಕಣ್ಣಿಡಲು ಬಿಸಿಸಿಐ ನಿರ್ಧರಿಸಿದ್ದು, ಆಟಗಾರರ ಒತ್ತಡ ನಿರ್ವಹಣೆ ಕುರಿತು ವರದಿ ತಯಾರಿಸಲಿದೆ ಎಂದು ತಿಳಿದುಬಂದಿದೆ.

ಐಪಿಎಲ್ ಟೂರ್ನಿ ವೇಳೆ 50 ಭಾರತೀಯ ಆಟಗಾರರ 'ಒತ್ತಡ ನಿರ್ವಹಣೆ' ಮೇಲೆ ಕಣ್ಣಿಡಲಿರುವ ಬಿಸಿಸಿಐ
ಸಂಗ್ರಹ ಚಿತ್ರ
Published On :
ನವದೆಹಲಿ: ಐಪಿಎಲ್ ಟೂರ್ನಿಗೆ ಕೇವಲ ಆರು ದಿನಗಳು ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟಿಗರ ಮೇಲೆ ಕಣ್ಣಿಡಲು ಬಿಸಿಸಿಐ ನಿರ್ಧರಿಸಿದ್ದು, ಆಟಗಾರರ ಒತ್ತಡ ನಿರ್ವಹಣೆ ಕುರಿತು ವರದಿ ತಯಾರಿಸಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 2019ರ ವಿಶ್ವಕಪ್ ಟೂರ್ನಿಗಾಗಿ ತಂಡವನ್ನು ಸಜ್ಜು ಮಾಡಲು ನಿರ್ಧರಿಸಿರುವ ಬಿಸಿಸಿಐ ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದೆ. ಭಾರತೀಯ ಕ್ರಿಕೆಟಿಗರ ಮಟ್ಟಿಗೆ ಐಪಿಎಲ್ ಟೂರ್ನಿ ಉತ್ತಮ ಆಟಗಾರರ ಪ್ರತಿಭಾ ಪ್ರದರ್ಶನದ ಅತ್ಯುತ್ತಮ ವೇದಿಕೆಯಾಗಿದೆ. ಇದೇ ಕಾರಣಕ್ಕೆ ಭಾರತ ತಂಡದ ಒಟ್ಟು 50 ಆಟಗಾರರ ಕುರಿತ ವರದಿ ತಯಾರಿಸಲು ಬಿಸಿಸಿಐ ಮುಂದಾಗಿದ್ದು, ಈ 50 ಆಟಗಾರರ ಪೈಕಿ 27 ಮಂದಿ ಕೇಂದ್ರೀಯ ಒಪ್ಪಂದ ಹೊಂದಿರುವ ಅಂದರೆ ಈಗಾಗಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ಆಟಗಾರರಾಗಿದ್ದು, ಉಳಿದ 23 ಮಂದಿ ಆಟಗಾರರು ದೇಶೀಯ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿರುವ ಆಟಗಾರರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಆಟಗಾರರ ವರದಿ ತಯಾರಿಕೆಗಾಗಿಯೇ ಪ್ರತ್ಯೇಕ ತಂಡವನ್ನು ಕೂಡ ರಚನೆ ಮಾಡಲಾಗಿದ್ದು, ಈ ತಂಡ ಆಟಗಾರರ ಫಿಟ್ನೆಸ್, ಗಾಯದ ಸಮಸ್ಯೆಯ ವರದಿ, ತರಬೇತಿ ಮತ್ತು ಪ್ರದರ್ಶನದ ಕುರಿತ ವರದಿ ತಯಾರಿಸಲಿದ್ದಾರೆ. 
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಒಟ್ಟು 50 ಆಟಗಾರರ ದತ್ತಾಂಶ ನಿರ್ವಹಣೆಗೆ ಅಧಿಕಾರಿಗಳನ್ನು ನಿಯಜಿಸಲಾಗಿದೆ. ಐಪಿಎಲ್ ಬಳಿಕ ಭಾರತ ತಂಡ ಸುಧೀರ್ಘ ವಿದೇಶಿ ಪ್ರವಾಸ ಮಾಡಲಿದ್ದು, ಐಪಿಎಲ್ ಬಳಿಕ ಮೊದಲಿಗೆ ಬ್ರಿಟನ್ ಪ್ರವಾಸ ಮಾಡಲಿದೆ. ಅಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ದೇಶಗಳೊಂದಿಗೆ ದ್ವಿಪಕ್ಷೀಯ ಸರಣಿ ಆಡಲಿದೆ. 2019ರ ವಿಶ್ವಕಪ್ ಟೂರ್ನಿ ಕೂಡ ಇಂಗ್ಲೆಂಡ್ ನಲ್ಲೇ ನಡೆಯಲಿದ್ದು, ಈ ಸರಣಿ ಭಾರತಕ್ಕೆ ಅಲ್ಲಿನ ಹವಾಗುಣ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. 
ಅಂತೆಯೇ ಈ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡದ ಆಟಗಾರರನ್ನುಭಾರತ ಮತ್ತು ಭಾರತ ಎ ತಂಡಗಳಿಗೆ ಆಯ್ಕೆ ಮಾಡುವುದಿಲ್ಲ. ಭಾರತ ಮತ್ತು ಭಾರತ ಎ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು 2019ರ ವಿಶ್ವಕಪ್ ಟೂರ್ನಿ ಸಂಭಾವ್ಯ ಆಟಗಾರರ ಪಟ್ಟಿಗೆ ಆಯ್ಕೆ ಮಾಡುವ ಸಾದ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.