ಚೆಂಡು ವಿರೂಪಗೊಳಿಸಿದ ಪ್ರಕರಣ: ಆಸಿಸ್ ಕೋಚ್ ಲೆಹ್ಮನ್ ಹುದ್ದೆ ಉಳಿಸಿದ ಆ 6 ಶಬ್ದಗಳು!
ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.

Published On :
ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಆಟಗಾರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದ್ದು, ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.
ಹೌದು...ಕೋಚ್ ಸ್ಖಾನಕ್ಕೆ ಲೆಹ್ಮನ್ ರಾಜಿನಾಮೆ ನೀಡಿದ್ದಾಗ ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಕ್ಲೀನ್ಚಿಟ್ ನೀಡಿದ್ದು ಎಲ್ಲರ ಹುಬ್ಬೇರಿಸಿತ್ತು. ಆದರೆ, ತನಿಖೆಯ ವೇಳೆ ಲೆಹ್ಮನ್ರ ವಾದವನ್ನು ಇಂಟಿಗ್ರಿಟಿ ಯೂನಿಟ್ (ತನಿಖಾ ತಂಡ) ಒಪ್ಪಿಕೊಂಡಿದ್ದರಿಂದ ಅವರಿಗೆ ಕೋಚ್ ಆಗಿ ಮುಂದುವರಿಯಲು ಅವಕಾಶ ನೀಡಲಾಗಿದೆ.
ಟಿವಿ ನೇರಪ್ರಸಾರದಲ್ಲಿ ಲೆಹ್ಮನ್, 12ನೇ ಆಟಗಾರ ಹ್ಯಾಂಡ್ಸ್ಕಾಂಬ್ಗೆ ವಾಕಿಟಾಕಿಯಲ್ಲಿ ಸೂಚನೆ ನೀಡಿದ್ದು ಸ್ಪಷ್ಟವಾಗಿತ್ತು. ಬಳಿಕ ಹ್ಯಾಂಡ್ಸ್ಕಾಂಬ್, ಬ್ಯಾಂಕ್ರಾಫ್ಟ್ರ ಜತೆ ಮೈದಾನದಲ್ಲಿ ಮಾತನಾಡಿದ್ದು ಪ್ರಸಾರಗೊಂಡಿತ್ತು. ಬ್ಯಾಂಕ್ರಾಫ್ಟ್ ಕೈಯಲ್ಲಿ ಏನೋ ಹಿಡಿದುಕೊಂಡಿದ್ದು, ಅದನ್ನು ಪ್ರಶ್ನಿಸುವಂತೆ ‘ವಾಟ್ ಈಸ್ ದ ಹೆಲ್ ಗೋಯಿಂಗ್ ಆನ್’ ಎಂದು ಲೆಹ್ಮನ್ ವಾಕಿಟಾಕಿ ಮೂಲಕ ಹ್ಯಾಂಡ್ಸ್ಕಾಂಬ್ಗೆ ಹೇಳಿದ್ದಾರೆ. ಬಳಿಕ ಹ್ಯಾಂಡ್ಸ್ಕೊಂಬ್, ಬ್ಯಾಂಕ್ರಾಫ್ಟ್ ರಲ್ಲಿ ಈ ವಿಷಯವನ್ನು ಕೇಳಿದ್ದರು ಎಂದು ಸಿಇಒ ಜೇಮ್ಸ್ ಸುದರ್ಲ್ಯಾಂಡ್ ತಿಳಿಸಿದ್ದಾರೆ.
ಇಂಟಿಗ್ರಿಟಿ ಯೂನಿಟ್ನ ಮುಖ್ಯಸ್ಥ ಇಯಾನ್ ರಾಯರ್ ತನಿಖೆಯ ವೇಳೆಯೂ ಲೆಹ್ಮನ್ ಇದನ್ನು ಹೇಳಿರುವ ಕಾರಣ ಅವರಿಗೆ ಕ್ಲೀನ್ಚಿಟ್ ನೀಡಲಾಗಿದೆ. ಲೆಹ್ಮನ್ ‘ಹೆಲ್’ ಬದಲಾಗಿ ಬೇರೆ ಶಬ್ದವನ್ನು ಬಳಸಿದ್ದರಷ್ಟೇ ಎಂದು ಸುದರ್ ಲ್ಯಾಂಡ್ ಸ್ಪಷ್ಟಪಡಿಸಿದ್ದಾರೆ. ಈ ಆರು ಶಬ್ದಗಳೇ ಲೆಹ್ಮನ್ರನ್ನು ವಜಾ ಶಿಕ್ಷೆಯಿಂದ ಬಚಾವ್ ಮಾಡಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sydneyಸಿಡ್ನಿಕ್ರಿಕೆಟ್ ಆಸ್ಟ್ರೇಲಿಯಾCricket Offbeatಕ್ರಿಕೆಟ್ ಸ್ವಾರಸ್ಯDarren LehmannCABall Tampering Rowಚೆಂಡು ವಿರೂಪಗೊಳಿಸಿದ ಪ್ರಕರಣಡಾರೆನ್ ಲೆಹ್ಮನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


