ಚೆಂಡು ವಿರೂಪಗೊಳಿಸಿದ ಕೆಲವು ಪ್ರಮುಖ ಪ್ರಕರಣಗಳು
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಆಡಿದ ಕಳ್ಳಾಟ ಇದೀಗ ಬಟಾಬಯಲಾಗಿದ್ದು, ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಸಿಸ್ ಕ್ರಿಕೆಟಿಗರು ವಿಶ್ವದ ಎದುರು ಖಳನಾಯಕರಾಗಿದ್ದಾರೆ.

Published On :
ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಆಡಿದ ಕಳ್ಳಾಟ ಇದೀಗ ಬಟಾಬಯಲಾಗಿದ್ದು, ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಸಿಸ್ ಕ್ರಿಕೆಟಿಗರು ವಿಶ್ವದ ಎದುರು ಖಳನಾಯಕರಾಗಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣ ಇದೇ ಮೊದಲೇನಲ್ಲ. ಇಂತಹ ಹಲವು ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಇಂತಹ ಪ್ರಮುಖ ಪ್ರಕರಣ ಒಂದು ಮೆಲುಕು ಇಲ್ಲಿದೆ.
1994, ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್
1994ರಲ್ಲಿ ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್ ಜೇಬಿನಲ್ಲಿ ಇರಿಸಿದ್ದ ಯಾವುದೋ ವಸ್ತುವನ್ನು ತೆಗೆದು ಚೆಂಡಿಗೆ ಲೇಪಿಸಿ ವಿರೂಪಗೊಳಿಸಲು ಪ್ರಯತ್ನಿಸಿದ್ದರು. ಇದು ಅಂಪೈರ್ ಗಳ ಗಮನಕ್ಕೆ ಬಂದಿತ್ತು, ಈ ಸಂಬಂಧ ರೆಫರಿಗೆ ದೂರು ನೀಡಲಾಗಿತ್ತು, ವಿಚಾರಣೆ ನಡೆಸಿ ಇಂಗ್ಲೆಂಡ್ ತಂಡದ ನಾಯಕ ಮೈಕ್ ಅಥರ್ಟನ್ ಅವರಿಗೆ ₹ 2.4 ಲಕ್ಷ ಮೊತ್ತದ ದಂಡ ವಿಧಿಸಲಾಗಿತ್ತು.
2000, ಪಾಕಿಸ್ತಾನದ ವೇಗಿ ವಕಾರ್ ಯೂನಿಸ್
2000ರಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ವೇಗಿ ವಕಾರ್ ಯೂನಿಸ್ ತಮ್ಮ ಉಗುರಿನ ಮೂಲಕ ಚೆಂಡಿನ ಸೀಮ್ ಅನ್ನು ವಿರೂಪಗೊಳಿಸಿದ್ದರು. ಅಂದಿನ ಪಂದ್ಯದ ರೆಫರಿ ಜಾನ್ ರೀಡ್ ಅವರು ಘಟನೆಯನ್ನು ಪರಿಶೀಲಿಸಿ ವಕಾರ್ ಯೂನಿಸ್ ಒಂದು ಪಂದ್ಯದ ನಿಷೇಧ ಹೇರಿದ್ದರು.
2006, ಪಾಕಿಸ್ತಾನ ತಂಡದ ನಾಯಕ ಇಂಜಮಾನ್ ಉಲ್ ಹಕ್
ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾದ ಪಾಕಿಸ್ತಾನ ನಾಲ್ಕನೇ ದಿನ ಚಹಾ ವಿರಾಮದ ನಂತರ ಅಂಗಣಕ್ಕೆ ಇಳಿಯಲಿಲ್ಲ. ಹೀಗಾಗಿ ಅಂಪೈರ್‌ಗಾಳದ ಡರೆಲ್ ಹೇರ್ ಮತ್ತು ಬಿಲಿ ಡಾಕ್ಟ್ರೋವ್ ಇಂಗ್ಲೆಂಡ್ ತಂಡ ವಿಜಯಿ ಎಂದು ಘೋಷಿಸಿದರು. ಮೂರು ವರ್ಷಗಳ ನಂತರ ಐಸಿಸಿ ಈ ಪಂದ್ಯದ ಫಲಿತಾಂಶವನ್ನು ಪರಿಷ್ಕರಿಸಿ ಡ್ರಾ ಎಂದು ಘೋಷಿಸಿತು. ಅಂದು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ರೆಫರಿ ರಂಜನ್ ಮದುಗಲೆ ಪಾಕ್ ತಂಡದ ನಾಯಕ ಇಂಜಮಾನ್ ಉಲ್ ಹಕ್ ಅವರಿಗೆ ಒಂದು ಪಂದ್ಯದ ನಿಷೇಧ ಹಾಗೂ ದಂಡ ವಿಧಿಸಿದ್ದರು.
2010, ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ
2010ರಲ್ಲಿ ಪರ್ಥ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಚೆಂಡಿನ ಸೀಮ್ ಅನ್ನು ಕಚ್ಚಿದ್ದರು. ಹೀಗಾಗಿ ಅವರಿಗೆ ಮುಂದಿನ ಟ್ವೆಂಟಿ–20 ಸರಣಿಯ ಎರಡು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು.
2013, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿಸ್
2013ರಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಫಾಫ್ ಡು ಪ್ಲೆಸಿ ಚೆಂಡನ್ನು ತಮ್ಮ ಪ್ಯಾಂಟ್ ಜೇಬಿನ ಜಿಪ್‌ಗೆ ಉಜ್ಜಿ ವಿರೂಪಗೊಳಿಸಿದ್ದರು. ಇದರಿಂದ ಅವರು ಪಂದ್ಯ ಶುಲ್ಕದ ಶೇ 50ರಷ್ಟನ್ನು ದಂಡದ ರೂಪದಲ್ಲಿ ತೆರಬೇಕಾಯಿತು.
2014, ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್
2014ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್ ಉಗುರಿನಿಂದ ಗೀರಿ ಚೆಂಡು ವಿರೂಪಗೊಳಿಸಿದ್ದರು. ತಪ್ಪೊಪ್ಪಿಕೊಂಡ ಅವರಿಂದ ಪಂದ್ಯ ಶುಲ್ಕದ ಶೇ 75ರಷ್ಟನ್ನು ದಂಡವಾಗಿ ವಿಧಿಸಲಾಗಿತ್ತು.
2016, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿಸ್
2016ರಲ್ಲಿ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ, ಬಾಯಲ್ಲಿದ್ದ ಮಿಂಟ್ ತೆಗೆದು ಚೆಂಡಿಗೆ ಅಂಟಿಸಿದ್ದರು. ತನಿಖೆ ನಡೆಸಿದ ಐಸಿಸಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


