ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ವಿರುದ್ಧ ಭುಗಿಲೆದ್ದ ಆಕ್ರೋಶ, ಶಿಸ್ತುಕ್ರಮದ ವಿರುದ್ದ ಕ್ರಿಕೆಟಿಗರು ಹೇಳಿದ್ದೇನು?
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಆಟಗಾರರ ವಿರುದ್ಧ ಮೊದಲ ದರ್ಜೆಯ ಶಿಕ್ಷೆ ನೀಡಿರುವ ಐಸಿಸಿ ವಿರುದ್ಧ ಇದೀಗ ಆಕ್ರೋಶ ಭುಗಿಲೆದ್ದಿದ್ದು, ಕ್ರಿಕೆಟ್ ರಂಗ ಸ್ಟಾರ್ ಆಟಗಾರರೇ ಐಸಿಸಿ ತಾರತಮ್ಯ ನೀತಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

Published On :
ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಆಟಗಾರರ ವಿರುದ್ಧ ಮೊದಲ ದರ್ಜೆಯ ಶಿಕ್ಷೆ ನೀಡಿರುವ ಐಸಿಸಿ ವಿರುದ್ಧ ಇದೀಗ ಆಕ್ರೋಶ ಭುಗಿಲೆದ್ದಿದ್ದು, ಕ್ರಿಕೆಟ್ ರಂಗ ಸ್ಟಾರ್ ಆಟಗಾರರೇ ಐಸಿಸಿ ತಾರತಮ್ಯ ನೀತಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.
ನಿನ್ನೆಯಷ್ಟೇ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಐಸಿಸಿ ತಾರತಮ್ಯ ನೀತಿ ವಿರುದ್ಧ ಟ್ವಿಟರ್ ನಲ್ಲಿ ಬಹಿರಂಗವಾಗಿ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಐಸಿಸಿ ವಿರುದ್ಧ ಖ್ಯಾತನಾಮ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಚೆಂಡು ವಿರೂಪಗೊಳಿಸುವುದನ್ನು ಪಂದ್ಯದ ಕಗ್ಗೊಲೆ ಎಂದು ಬಣ್ಣಿಸಿ ಐಸಿಸಿ ಇನ್ನೂ ಕಠಿಣ ಶಿಕ್ಷೆ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಕೃತ್ಯಕ್ಕೆ ಮುಂದಾಗುವ ಆಟಗಾರರಿಗೆ ಕಠಿಣ ಸಂದೇಶ ರವಾನಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇಂಗ್ಲಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಕೆವಿನ್ ಪೀಟರ್ಸೆನ್, ರೋಡ್ನಿ ಹಾಗ್, ಗ್ರೇಮ್ ಫ್ಲವರ್ ನಂತಹ ದಿಗ್ಗಜ ಆಟಗಾರರೇ ಐಸಿಸಿ ಶಿಸ್ತುಕ್ರಮವನ್ನು ಟೀಕಿಸಿದ್ದಾರೆ.
ಐಸಿಸಿ ವಿರುದ್ಧ ಸ್ಟಾರ್ ಆಟಗಾರರು ಮಾಡಿರುವ ಟ್ವೀಟ್ ಗಳು ಇಂತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


