ಕ್ರಿಕೆಟ್ ದೇವರು ಸಚಿನ್ ಕಾಲಿಗೆ ಬಿದ್ದ ವಿನೋದ್ ಕಾಂಬ್ಳಿ!
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟ್ ದಿಗ್ಗಜರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಸ್ನೇಹವು ಶ್ರೇಷ್ಠವಾದದ್ದು...

Published On :
ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟ್ ದಿಗ್ಗಜರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಸ್ನೇಹವು ಶ್ರೇಷ್ಠವಾದದ್ದು. ಅಂತಹ ಈ ಇಬ್ಬರು ಚಿಗರಿ ದೋಸ್ತುಗಳು ಟೀಂ ಇಂಡಿಯಾದಲ್ಲಿ ಆಡಿದ್ದರು.
1988ರ ಹ್ಯಾರಿಸ್ ಶೀಲ್ಡ್ ಟೂರ್ನಮೆಂಟ್ ನ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ 664 ರನ್ ಗಳ ಜತೆಯಾಟ ನೀಡಿದ್ದು ಇಂದಿಗೂ ಒಂದು ದಾಖಲೆ. ಇಬ್ಬರು ತಮ್ಮ ಸ್ನೇಹದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುತ್ತಾರೆ.
ಮುಂಬೈ ಟಿ20 ಲೀಗ್ ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಬ್ಬರು ಕ್ರಿಕೆಟ್ ದಿಗ್ಗಜರು ಮುಖಾಮುಖಿಯಾಗಿದ್ದರು. ಈ ವೇಳೆ ಪ್ರಶಸ್ತಿ ನೀಡಲು ಬಂದಿದ್ದ ಸಚಿನ್ ಅವರ ಕಾಲನ್ನು ಮುಟ್ಟಿ ವಿನೋದ್ ಕಾಂಬ್ಳಿ ನಮಸ್ಕರಿಸಿದ್ದಾರೆ.
ಕಾಂಬ್ಳಿ ಕೋಚ್ ಆಗಿದ್ದ ಶಿವರಾಜ್ ಪಾರ್ಕ್ ಲಯನ್ಸ್ ತಂಡ ನೈಟ್ಸ್ ಮುಂಬೈ ವಿರುದ್ಧ ಮೂರು ರನ್ ಗಳಿಂದ ಸೋಲು ಕಂಡಿತ್ತು. ಪಂದ್ಯ ಮುಕ್ತಾಯ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಕಾಂಬ್ಳಿ ಅವರು ಸಚಿನ್ ಬಳಿಕೆ ಹೋಗಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Sachin Tendulkarಸಚಿನ್ ತೆಂಡೂಲ್ಕರ್Vinod Kambliವಿನೋದ್ ಕಾಂಬ್ಳಿMumbai T20 Leagueಮುಂಬೈ ಟಿ20 ಲೀಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


