ಕ್ರಿಕೆಟ್

ಬಿಸಿಸಿಐನಿಂದ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್; ಐಪಿಎಲ್‌ನಲ್ಲಿ ಆಡಬಹುದು!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭ್ರಷ್ಟಾಚಾರ ಆರೋಪದಿಂದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದೆ...

ಬಿಸಿಸಿಐನಿಂದ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್; ಐಪಿಎಲ್‌ನಲ್ಲಿ ಆಡಬಹುದು!
ಮೊಹಮ್ಮದ್ ಶಮಿ
Published On :
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭ್ರಷ್ಟಾಚಾರ ಆರೋಪದಿಂದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದೆ. 
ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಟೀಂ ಇಂಡಿಯಾದೊಂದಿಗೆ ತವರಿಗೆ ಮರಳುವ ವೇಳೆ ಶಮಿ ದುಬೈ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಪಾಕಿಸ್ತಾನದ ಮಹಿಳೆಯೊಬ್ಬರು ಶಮಿ ಜತೆಗಿದ್ದರು. ಅಲ್ಲದೆ ಆಕೆ ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬ ವ್ಯಕ್ತಿ ನೀಡಿದ ಹಣವನ್ನು ಶಮಿಗೆ ಹಸ್ತಾಂತರಿಸಿದ್ದರು ಎಂಬ ಗಂಭೀರ ಆರೋಪವನ್ನು ಶಮಿ ವಿರುದ್ದ ಪತ್ನಿ ಹಸೀನ್ ಜಹಾನ್ ಮಾಡಿದ್ದರು. 
ಬಿಸಿಸಿಐ ನಿರ್ವಾಹಕ ಸಮಿತಿ ಬಿಸಿಸಿಐ ವಿರೋಧಿ ಭ್ರಷ್ಟಾಚಾರ ಘಟಕದ ಮುಖ್ಯಸ್ಥ ನೀರಜ್ ಕುಮಾರ್ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿತ್ತು. ಅಂತೆ ನೀರಜ್ ಕುಮಾರ್ ಅವರು ಶಮಿ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ವರದಿ ನೀಡಿದೆ ಎಂದು ಹೇಳಲಾಗಿದೆ. 
ಈ ಸಂಬಂಘ ತನಿಖೆ ನಡೆಸುತ್ತಿದ್ದ ಬಿಸಿಸಿಐ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದೆ. ಇದರೊಂದಿಗೆ ಮೊಹಮ್ಮದ್ ಶಮಿ 2018ರ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ ಆಡಲಿದ್ದಾರೆ. ಜತೆಗೆ ವಾರ್ಷಿಕ ಬಿ ಶ್ರೇಣಿ ಗುತ್ತಿಗೆಗೆ ಶಮಿ ಅರ್ಹರಾಗಿದ್ದು 3 ಕೋಟಿ ರುಪಾಯಿ ಪಡೆಯಬಹುದಾಗಿದೆ. 
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಭ್ರಷ್ಟಾಚಾರ ಆರೋಪ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.