ಕ್ರಿಕೆಟ್

ನಿಡಹಾಸ್ ಟ್ರೋಫಿ ಫೈನಲ್: ಕೊನೆಯ ಎಸೆತದಲ್ಲಿ ರೋಚಕ ಭಾರತಕ್ಕೆ ಜಯ, ಹಿರಿಯ ಕ್ರಿಕೆಟಿಗರಿಂದ ಶ್ಲಾಘನೆ

ಬಾಂಗ್ಲಾದೇಶದ ಪರ ವಾಲಿದ್ದ ವಿಜಯಲಕ್ಷ್ಮಿಯನ್ನು ಮತ್ತೆ ಅಂತಿಮ ಓವರ್ ನಲ್ಲಿ ತಮ್ಮತ್ತ ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ನಿಡಹಾಸ್ ಟ್ರೋಫಿ ತಂದಿತ್ತಿದ್ದಾರೆ.

ನಿಡಹಾಸ್ ಟ್ರೋಫಿ ಫೈನಲ್: ಕೊನೆಯ ಎಸೆತದಲ್ಲಿ ರೋಚಕ ಭಾರತಕ್ಕೆ ಜಯ, ಹಿರಿಯ ಕ್ರಿಕೆಟಿಗರಿಂದ ಶ್ಲಾಘನೆ
ಸಂಗ್ರಹ ಚಿತ್ರ
Published On :
ಕೊಲಂಬೋ: ಬಾಂಗ್ಲಾದೇಶದ ಪರ ವಾಲಿದ್ದ ವಿಜಯಲಕ್ಷ್ಮಿಯನ್ನು ಮತ್ತೆ ಅಂತಿಮ ಓವರ್ ನಲ್ಲಿ ತಮ್ಮತ್ತ ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ನಿಡಹಾಸ್ ಟ್ರೋಫಿ ತಂದಿತ್ತಿದ್ದಾರೆ.
ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ  ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ನಿಡಹಾಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಬಾಂಗ್ಲಾದೇಶ ನೀಡಿದ್ದ 167 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಅಂತಿಮ ಎಸೆತದಲ್ಲಿ ಐದು ರನ್ ಗಳ ಅವಶ್ಯಕತೆ ಇತ್ತು. ಆಗ ಕಾರ್ತಿಕ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ರೋಚಕ ಜಯ ದಾಖಲಿಸಿದರು.
ಭಾರತದ ಈ ಜಯ ಇದೀಗ ಟ್ವಿಟರ್ ನಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿದ್ದು, ಮಾಜಿ ಮತ್ತು ಹಿರಿಯ ಕ್ರಿಕೆಟಿಗರು ಭಾರತ ಕ್ರಿಕೆಟ್ ತಂಡದ ಆಟಗಾರರ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಒಂದಷ್ಟು ಸ್ವಾರಸ್ಯಕರ ಮತ್ತು ಕುತೂಹಲಕರ ಟ್ವೀಟ್ ಗಳು ಇಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.