ಕ್ರಿಕೆಟ್

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನೇಪಾಳ ಹೊಸ ಸೇರ್ಪಡೆ!

ಅಂತಾರಾಷ್ಟ್ರೀಯ ಏಕದಿನ ಕ್ಲಬ್ ಗೆ ನೇಪಾಳ ತಂಡ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ತಂಡವನ್ನು ಮಣಿಸಿದೆ...

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನೇಪಾಳ ಹೊಸ ಸೇರ್ಪಡೆ!
ನೇಪಾಳ ಕ್ರಿಕೆಟ್ ತಂಡ
Published On :
ಅಂತಾರಾಷ್ಟ್ರೀಯ ಏಕದಿನ ಕ್ಲಬ್ ಗೆ ನೇಪಾಳ ತಂಡ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ತಂಡವನ್ನು ಮಣಿಸಿದೆ. 
2022ರವರೆಗೆ ತಾತ್ಕಾಲಿಕ ಏಕದಿನ ಸದಸ್ಯ ತಂಡವನ್ನು ನೇಪಾಳ ಸೇರಿಕೊಂಡಿದೆ. ಇದರಲ್ಲಿ ಸ್ಕಾಟ್‌ಲ್ಯಾಂಡ್, ನೆದರ್ಲ್ಯಾಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇನ್ನಿತರ ತಂಡಗಳು. 2022ರ ನಂತರ ಈ ನಾಲ್ಕು ರಾಷ್ಟ್ರಗಳಿಗೆ ಏಕದಿನದ ಅಧಿಕೃತ ತಂಡಗಳು ಎಂಬ ಸ್ಥಾನ ಸಿಗಲಿದೆ. 
ನೇಪಾಳ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದ ಹಸ್ತಕ್ಷೇಪವನ್ನು ಅಮಾನತುಗೊಳಿಸಿದ ನಂತರ ತಂಡದ ಸಾಧನೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಇದೊಂದು ದೊಡ್ಡ ಸಾಧನೆ, ಇದಕ್ಕಾಗಿ ನಾವು ಬಹಳ ಸಮಯದಿಂದ ಶ್ರಮಿಸಿದ್ದೇವೆ ಎಂದು ತಂಡದ ನಾಯಕ ಪರಾಸ್ ಖಡ್ಕಾ ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.