ನಿಡಹಾಸ್ ತ್ರಿಕೋನ ಟಿ20 ಸರಣಿ: ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿದ ಶ್ರೀಲಂಕಾ
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿಡಹಾಸ್ ತ್ರಿಕೋನ ಟಿ20 ಸರಣಿ ನಾಲ್ಕನೇ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ಪ್ರವಾಸಿ ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿದೆ.

Published On :
ಕೊಲಂಬೋ: ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿಡಹಾಸ್ ತ್ರಿಕೋನ ಟಿ20 ಸರಣಿ ನಾಲ್ಕನೇ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ಪ್ರವಾಸಿ ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿದೆ.
ಸೋಮವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ ಆರಂಭಿಕರಾದ ಧನುಷ್ಕ ಗುಣತಿಲಕ (17 ರನ್) ಮತ್ತು ಕುಶಾಲ್ ಮೆಂಡಿಸ್ (55 ರನ್) ಉತ್ತಮ ಆರಂಭ ಒದಗಿಸಿದರು. 25 ರನ್ ಗಳಿಸಿದ ಈ ಜೋಡಿಯನ್ನು ಶಾರ್ಧೂಲ್ ಠಾಕೂರ್ 17 ರನ್ ಗಳಿಸಿದ್ದ ಗುಣತಿಲಕ ಅವರನ್ನು ಔಟ್ ಮಾಡುವ ಮೂಲಕ ಬೇರ್ಪಡಿಸಿದರು.
ಬಳಿಕ ಬಂದ ಕುಶಾಲ್ ಪೆರೇರಾ ಕೇವಲ 3 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಸಿಯನ್ ಸೇರಿಕೊಂಡರು. ಈ ಹಂತದಲ್ಲಿ ಲಂಕಾ ತಂಡ ಕೊಂಚ ಒತ್ತಡಕ್ಕೆ ಒಳಗಾಯಿತಾದರೂ, ಬಳಿಕ ಬಂದ ಉಪುಲ್ ತರಂಗಾ ತಾಳ್ಮೆಯ ಆಟ ಪ್ರದರ್ಶನ ಮಾಡುವ ಮೂಲಕ ಲಂಕಾ ರನೇ ವೇಗ ಹೆಚ್ಚಿಸಿದರು. ಮತ್ತೊಂದು ತುದಿಯಲ್ಲಿದ್ದ ಕುಶಾಲ್ ಮೆಂಡಿಸ್ ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ಲಂಕಾ ರನ್ ವೇಗ ಹೆಚ್ಚಿಸಿದರು. ಈ ಹಂತದಲ್ಲಿ ಕುಶಾಲ್ ಮೆಂಡಿಸ್ ಕೇವಲ 38 ಎಸೆತಗಳಲ್ಲಿ 58 ರನ್ ಸಿಡಿಸಿ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಉಪುಲ್ ತರಂಗಾ 22 ರನ್ ಗಳಿಸಿ ವಿಜಯ್ ಶಂಕರ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಅವರ ಬೆನ್ನಲ್ಲೇ ಕ್ರೀಸ್ ಗೆ ಆಗಮಿಸಿದ್ದ ತಿಸರಾಪರೇರಾ 15 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 55 ರನ್ ಗಳಿಸಿದ್ದ ಕುಶಾಲ್ ಮೆಂಡಿಸ್ ಕೂಡ ಚಾಹಲ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಸುಲಭದ ಕ್ಯಾಚ್ ನೀಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಅಂತಿಮವಾಗಿ ಶ್ರೀಲಂಕಾ ತಂಡ ನಿಗದಿತ 19 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿತು.
ಭಾರತದ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಗಳಿಸಿ ಯಶಸ್ವೀ ಬೌಲರ್ ಎನಿಸಿಕೊಂಡರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು. ಅಂತೆಯೇ ಉನಾದ್ಕತ್, ಚಾಹಲ್ ಮತ್ತು ವಿಜಯ್ ಶಂಕರ್ ತಲಾ ಒಂದು ವಿಕೆಟ್ ಕಬಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


