ಕ್ರಿಕೆಟ್

ಕಾಂಗರೂಗಳ ವಿರುದ್ಧ ದಾಖಲೆ ರನ್ ಚಚ್ಚಿದ್ದ ಆಂಗ್ಲರಿಗೆ ತಲೆನೋವಾದ ಭಾರತೀಯ ಸ್ಪಿನ್ನರ್ ಗಳು!

ಪ್ರಬಲ ಆಸ್ಟ್ರೇಲಿಯಾ ವಿರುದ್ಧ ದಾಖಲೆ ಪ್ರಮಾಣದ ರನ್ ಚಚ್ಚಿ ಸರಣಿ ವೈಟ್ ವಾಶ್ ಮಾಡಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳಿಗೆ ಭಾರತೀಯ ಸ್ಪಿನ್ನರ್ ಗಳ ಖಂಡಿತಾ ತಲೆನೋವಾಗಲಿದ್ದಾರೆ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಕಾಂಗರೂಗಳ ವಿರುದ್ಧ ದಾಖಲೆ ರನ್ ಚಚ್ಚಿದ್ದ ಆಂಗ್ಲರಿಗೆ ತಲೆನೋವಾದ ಭಾರತೀಯ ಸ್ಪಿನ್ನರ್ ಗಳು!
ಸಂಗ್ರಹ ಚಿತ್ರ
Published On :
ನವದೆಹಲಿ: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ದಾಖಲೆ ಪ್ರಮಾಣದ ರನ್ ಚಚ್ಚಿ ಸರಣಿ ವೈಟ್ ವಾಶ್ ಮಾಡಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳಿಗೆ ಭಾರತೀಯ ಸ್ಪಿನ್ನರ್ ಗಳ ಖಂಡಿತಾ ತಲೆನೋವಾಗಲಿದ್ದಾರೆ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ಮೂಲಕ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಅದೇ ಹಮ್ಮಸ್ಸಿನಲ್ಲೇ ಇಂಗ್ಲೆಂಡ್ ಪ್ರವಾಸವನ್ನು ಎದುರು ನೋಡುತ್ತಿದೆ. ಇದರ ಬೆನ್ನಲ್ಲೇ ಆಂಗ್ಲರ ವಿರುದ್ಧ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಎಂದು ಟೀಂ ಇಂಡಿಯಾ ಟರ್ಬೋನೇಟರ್ ಹರ್ಭಜನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಹಿನ್ನಲೆಯಲ್ಲಿ ಮಾತನಾಡಿರುವ ಭಜ್ಜಿ, 'ಇಂಗ್ಲೆಂಡ್​ ಆಟಗಾರರನ್ನು ಕಟ್ಟಿಹಾಕಲು ಭಾರತದ ಸ್ಪಿನ್ನರ್​ಗಳು ಸಾಕು. ಈ ಬಾರಿಯ ಇಂಗ್ಲೆಂಡ್​ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಲಿದೆ. ಸ್ಪಿನ್​ ಅಸ್ತ್ರಗಳಾದ ಕುಲದೀಪ್​ ಯಾದವ್​ ಮತ್ತು ಯಜುವೇಂದ್ರ ಚಾಹಲ್​ ಇಂಗ್ಲೆಂಡ್​ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಲಿದ್ದಾರೆ. ಆಂಗ್ಲರು ರಿಸ್ಟ್​ ಸ್ಪಿನ್ನರ್​ಗಳ ಎದುರು ಉತ್ತಮ ಪ್ರದರ್ಶನ ತೋರಿದ ಉದಾಹರಣೆಗಳೇ ಇಲ್ಲ. ಇದು ಭಾರತದ ಅತೀ ದೊಡ್ಡ ಸಕಾರಾತ್ಮಕ ಅಂಶವಾಗಿದ್ದು, ಇಂಗ್ಲೆಂಡ್​ ಬ್ಯಾಟ್ಸ್​ಮನ್ ​ಗಳು ತಿಣುಕಾಡಲಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಆಸಿಸ್ ವಿರುದ್ಧದ ಆಂಗ್ಲರ ವೈಟ್ ವಾಶ್ ಕುರಿತು ಮಾತನಾಡಿದ ಭಜ್ಜಿ, 'ಆಸ್ಟ್ರೇಲಿಯಾ ತಂಡವನ್ನು ಇಂಗ್ಲೆಂಡ್​ ವೈಟ್​ವಾಷ್​​ ಮಾಡಿರಬಹುದು. ಆದರೆ ಭಾರತ ತಂಡವನ್ನು ಸೋಲಿಸಲು ಭಾರತ, ಆಸ್ಟ್ರೇಲಿಯಾವಲ್ಲ, ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.