ಕ್ರಿಕೆಟ್

'ದಾಖಲೆಗಳ ವೀರ' ವಿರಾಟ್ ಕೊಹ್ಲಿ ಮಾಡ್ತಾರಾ ಮತ್ತೊಂದು ವಿಶ್ವದಾಖಲೆ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರೆ ಸಾಕು ಒಂದಲ್ಲ ಒಂದು ದಾಖಲೆಗಳನ್ನು ನಿರ್ಮಿಸುತ್ತಾರೆ. ಇನ್ನು ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಟಿ20...

'ದಾಖಲೆಗಳ ವೀರ' ವಿರಾಟ್ ಕೊಹ್ಲಿ ಮಾಡ್ತಾರಾ ಮತ್ತೊಂದು ವಿಶ್ವದಾಖಲೆ?
ವಿರಾಟ್ ಕೊಹ್ಲಿ
Published On :
ಡಬ್ಲಿನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರೆ ಸಾಕು ಒಂದಲ್ಲ ಒಂದು ದಾಖಲೆಗಳನ್ನು ನಿರ್ಮಿಸುತ್ತಾರೆ. ಇನ್ನು ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಕೊಹ್ಲಿಯ ಮತ್ತೊಂದು ದಾಖಲೆಗೆ ನಿರ್ಮಿಸಬಹುದು. 
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 2 ಸಾವಿರ ರನ್ ಪೂರೈಸಲು ಕೊಹ್ಲಿ ಇನ್ನು 17 ರನ್ ಗಳ ಕೊರತೆಯಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 17 ರನ್ ಬಾರಿಸಿದರೆ ಟಿ20 ಕ್ರಿಕೆಟ್ ನಲ್ಲೇ ಅತೀ ವೇಗವಾಗಿ 2000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರನಾಗಲಿದ್ದಾರೆ. 
ಕೊಹ್ಲಿ 57 ಟಿ20 ಪಂದ್ಯಗಳನ್ನಾಡಿದ್ದು 53 ಇನ್ನಿಂಗ್ಸ್ ಗಳಿಂದ 50.84ರ ಸರಾಸರಿಯಲ್ಲಿ 1983 ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಲು ಕೊಹ್ಲಿಗೆ ಇನ್ನು ಕೇವಲ 17 ರನ್ ಬೇಕಿದ್ದು ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಲಿದ್ದಾರೆ. 
ಇನ್ನು ನ್ಯೂಜಿಲೆಂಡ್ ತಂಡದ ಆಟಗಾರ ಮಾರ್ಟಿನ್ ಗುಪ್ಟಿಲ್ 68 ಪಂದ್ಯಗಳಲ್ಲಿ 2271 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 2140 ಗಳಿಸಿರುವ ಬ್ರೆಂಡನ್ ಮೆಕಲಮ್ ಎರಡನೇ ಸ್ಥಾನ ಹಾಗೂ 1989 ರನ್ ಬಾರಿಸುವ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ಮೂರನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.