ವಿಚಿತ್ರ ಬೌಲಿಂಗ್ ಶೈಲಿ: ರವಿ ಜೋಶಿ ಈತ ಭಾರತದ ಪೌಲ್ ಆ್ಯಡಮ್ಸ್
ಮಧ್ಯಪ್ರದೇಶ ಪ್ರಿಮಿಯರ್ ಲೀಗ್(ಎಂಪಿಎಲ್)ನಲ್ಲಿ ರೇವಾ ತಂಡದ ಪರ ಆಡುತ್ತಿರುವ ರವಿ ಜೋಶಿ ತಮ್ಮ ವಿಚಿತ್ರ ರೀತಿಯಲ್ಲಿ ಮೈ ಮುರಿಯುಂತೆ ಮಾಡಿ ಬೌಲಿಂಗ್...

Published On :
ಭೋಪಾಲ್: ಮಧ್ಯಪ್ರದೇಶ ಪ್ರಿಮಿಯರ್ ಲೀಗ್(ಎಂಪಿಎಲ್)ನಲ್ಲಿ ರೇವಾ ತಂಡದ ಪರ ಆಡುತ್ತಿರುವ ರವಿ ಜೋಶಿ ತಮ್ಮ ವಿಚಿತ್ರ ರೀತಿಯಲ್ಲಿ ಮೈ ಮುರಿಯುಂತೆ ಮಾಡಿ ಬೌಲಿಂಗ್ ಮಾಡುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ಕ್ರಿಕೆಟ್ ನಲ್ಲಿ ಹೆಚ್ಚಾಗಿ ಕಾಣಲ್ಪಡದ ಚೈನಾಮ್ಯಾನ್ ಬೌಲಿಂಗ್ ಆಕ್ಷನ್ ಮೂಲಕ ರವಿ ಜೋಶಿ ಸುದ್ದಿಯಾಗಿದ್ದಾರೆ.
21 ವರ್ಷದ ರವಿ ಜೋಶಿ ಬೌಲಿಂಗ್ ಮಾಡುವಾಗ ಹೆಚ್ಚು ಬಾರಿ ಕೈಯನ್ನು ತಿರುಗಿಸುವುದರಿಂದ ಆತನ ಬೌಲಿಂಗ್ ಅನ್ನು ಎದುರಿಸಲು ಬ್ಯಾಟ್ಸ್ ಮನ್ ಗಳು ತಿಣುಕಾಡುತ್ತಿದ್ದಾರೆ. ಬೌಲಿಂಗ್ ಮಾಡುವಾಗ ಚೆಂಡು ತಿರುಗುವುದಕ್ಕಿಂತ ಹೆಚ್ಚು ರವಿ ಜೋಶಿ ದೇಹ ತಿರುಗುವುದೇ ಎಲ್ಲರಿಗೂ ಅಚ್ಚರಿ ಹುಟ್ಟಿಸುವ ವಿಷಯವಾಗಿದೆ.
ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಪೌಲ್ ಆಂಡಮ್ಸ್‌ನ ಬೌಲಿಂಗ್ ಆಕ್ಷನ್ ನ್ನು ರವಿ ಜೋಶಿ ನೆನಪಿಸುತ್ತಿದ್ದಾರೆ. ಈತ ಬೌಲಿಂಗ್ ಮಾಡುವಾಗ ಸರಿಸುಮಾರು 360 ಡಿಗ್ರಿಯಲ್ಲಿ ಶರೀರವನ್ನು ತಿರುಗಿಸಿ ಬೌಲಿಂಗ್ ಮಾಡುವ ಶೈಲಿಯೇ ಹೆಚ್ಚು ಗಮನ ಸೆಳೆದಿದೆ.
ಟೀಂ ಇಂಡಿಯಾ ಪರ ಆಡಬೇಕೆಂಬುದು ನನ್ನ ಹೆಬ್ಬಯಕೆಯಾಗಿದೆ. ಹಲವು ಲೀಗ್ ಟೂರ್ನಿಗಳಲ್ಲಿ ನಾನು ಆಡಿದ್ದೇನೆ ಆದರೆ ಟೀಂ ಇಂಡಿಯಾ ಜೆರ್ಸಿ ತೊಡಬೇಕು ಎಂಬುದು ನನ್ನ ಅಭಿಲಾಶೆ. ಶೀಘ್ರದಲ್ಲೇ ನಾನು ದೆಹಲಿಗೆ ತೆರಳುತ್ತಿದ್ದು ಅಲ್ಲಿ ತರಬೇತಿ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತMystery spinnerCricket Offbeatಕ್ರಿಕೆಟ್ ಸ್ವಾರಸ್ಯPaul Adamsಪೌಲ್ ಆ್ಯಡಮ್ಸ್Rewa TeamRavi Joshiರೇವಾ ತಂಡವಿಚಿತ್ರ ಬೌಲರ್ರವಿ ಜೋಶಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


