ಕ್ರಿಕೆಟ್

ನಿಮ್ಮ ಬಾಯಿಯಿಂದ ಬರುವ ಮಾತು ಕಸಕ್ಕಿಂತ ಕೀಳು: ಅನುಷ್ಕಾ ಶರ್ಮಗೆ ತಿರುಗೇಟು

ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಕ್ಷಮೆ ಕೇಳಿದ್ದರೂ ಕೂಡ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ...

ನಿಮ್ಮ ಬಾಯಿಯಿಂದ ಬರುವ ಮಾತು ಕಸಕ್ಕಿಂತ ಕೀಳು: ಅನುಷ್ಕಾ ಶರ್ಮಗೆ ತಿರುಗೇಟು
ಅನುಷ್ಕಾ ಶರ್ಮ
Published On :

ಮುಂಬೈ: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಕ್ಷಮೆ ಕೇಳಿದ್ದರೂ ಕೂಡ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಪ್ರಚಾರ ಪಡೆಯಲು ಬಯಸುತ್ತಾರೆ ಎಂದು ಕಾರಿನಿಂದ ಕಸ ಎಸೆದು ನಟಿ ಅನುಷ್ಕಾ ಶರ್ಮರಿಂದ ಬೈಗುಳ ಕೇಳಿದ ವ್ಯಕ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಅರ್ಹಾನ್ ಸಿಂಗ್ ಎಂಬ ವ್ಯಕ್ತಿ, ತಾನು ಕಾರಿನಲ್ಲಿ ಹೋಗುತ್ತಿರುವಾಗ ಒಂದು ತುಂಡು ಪ್ಲಾಸ್ಟಿಕ್ ಕಸವನ್ನು ಕಾರಿನಿಂದ ಹೊರಗೆ ಹಾರಿತು. ಆಗ ಒಬ್ಬ ಮಹಿಳೆ ಬೈಯಲು ಆರಂಭಿಸಿದರು. ಯಾರೆಂದು ಕಾರಿನ ಗ್ಲಾಸು ತೆಗೆದು ನೋಡುವಾಗ ಅನುಷ್ಕಾ ಶರ್ಮ. ನಾನು ಸ್ಸಾರಿ ತಪ್ಪಾಯಿತೆಂದು ಹೇಳಿ ಕಾರಿನಿಂದ ಇಳಿದು ಕಸವನ್ನು ತೆಗೆದಿದ್ದೆ. ಆದರೆ ಅವರು ತಮಗೆ ಬುದ್ದಿಮಾತು ಹೇಳಿ ಬೈಯುವುದನ್ನು ವಿಡಿಯೊ ಮಾಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಾನು ಕ್ಷಮೆ ಕೇಳಿರುವುದನ್ನು ಹಾಕಿಲ್ಲ. ಒಂದು ಸಣ್ಣ ವಿಷಯವನ್ನು ದೊಡ್ಡದು ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ, ಇದು ಪಬ್ಲಿಸಿಟಿ ಗಿಮಿಕ್ ಎಂದು ಆರೋಪಿಸಿದ್ದಾರೆ.

ಕಸವನ್ನು ತಾನು ಬೇಕೆಂದೇ ಎಸೆದಿರಲಿಲ್ಲ. ಆದರೆ ಸೆಲೆಬ್ರಿಟಿಯಾಗಿ ಅನುಷ್ಕಾ ಶರ್ಮ ಬಾಯಿಂದ ಬಂದ ಮಾತು ಕಸಕ್ಕಿಂತ ಕಡೆಯಾಗಿತ್ತು. ನಿಮ್ಮ ದುಬಾರಿ ಕಾರಿನಲ್ಲಿ ಕುಳಿತುಕೊಂಡು ಸೆಲೆಬ್ರಿಟಿಯಾಗಿ ನೀವು ವಿಡಿಯೊ ಮಾಡಿ ಅಪ್ ಲೋಡ್ ಮಾಡಿದ್ದರ ಹಿಂದಿನ ಉದ್ದೇಶವೇನು ಎಂದು ಅರ್ಹಾನ್ ಸಿಂಗ್ ಕೇಳಿದ್ದಾರೆ.

ಇದಕ್ಕೆ ಅನುಷ್ಕಾ ಶರ್ಮ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.