ಕ್ರಿಕೆಟ್

ಅಮೆರಿಕದಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಬೇಸ್ ಬಾಲ್ ಎಡವಟ್ಟು, ನಗೆಪಾಟಲು!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಬಳಿಕ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಪತ್ನಿ ರಿತಿಕಾ ಜೊತೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ...

ಅಮೆರಿಕದಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಬೇಸ್ ಬಾಲ್ ಎಡವಟ್ಟು, ನಗೆಪಾಟಲು!
ರೋಹಿತ್ ಶರ್ಮಾ
Published On :
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಬಳಿಕ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಪತ್ನಿ ರಿತಿಕಾ ಜೊತೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. 
ಅಮೆರಿಕ ಪ್ರವಾಸದಲ್ಲಿರುವ ರೋಹಿತ್ ಶರ್ಮಾರನ್ನು ಅಲ್ಲಿನ ಪ್ರತಿಷ್ಠಿತ ಸಿಯಾಟಲ್ ಮರಿನರ್ಸ್ ಬೇಸ್ ಬಾಲ್ ತಂಡ ಪಂದ್ಯಕ್ಕೆ ಆಗಮಿಸುವಂತೆ ಆಹ್ವಾನ ನೀಡಿತ್ತು. ಪಂದ್ಯದ ಆರಂಭ ಸೂಚಿಸುವ 'ಫಸ್ಟ್ ಪಿಚ್' (ಮೊದಲ ಎಸೆತ) ಎಸೆಯುವ ಅವಕಾಶವನ್ನು ರೋಹಿತ್ ಶರ್ಮಾ ಗೆ ಕಲ್ಪಿಸಲಾಗಿತ್ತು. 
ಈ ವೇಳೆ ಚೆಂಡನ್ನು ರೋಹಿತ್ ಶರ್ಮಾ ಕ್ಯಾಚರ್ ಗೆ ಸರಿಯಾಗಿ ಎಸೆಯದೆ ಎಡವಟ್ಟು ಮಾಡಿದ್ದಾರೆ. ಕ್ರಿಕೆಟ್ ನಲ್ಲಿ ವಿಕೆಟ್ ನತ್ತ ಚೆಂಡನ್ನು ಎಸೆಯುವ ರೀತಿ ಕ್ಯಾಚರ್ ಗೆ ಬೇಸ್ ಬಾಲ್ ಎಸೆಯಬೇಕಿತ್ತು. ಆದರೆ ರೋಹಿತ್ ವಿಫಲರಾದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳುಗ ರೋಹಿತ್ ಕಾಲೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.