ಕ್ರಿಕೆಟ್: 'ಮೈಂಡ್ ಲೆಸ್', ಏಷ್ಯಾ ಕಪ್ 2018 ವೇಳಾಪಟ್ಟಿಗೆ ಬಿಸಿಸಿಐ ತೀವ್ರ ವಿರೋಧ
ಸೆಪ್ಟೆಂಬರ್ ನಲ್ಲಿ ಆಯೋಜನೆಯಾಗಿರುವ ಏಷ್ಯಾ ಕಪ್ ಪಂದ್ಯಾವಳಿಯ ವೇಳಾ ಪಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.

Published On :
ಮುಂಬೈ: ಸೆಪ್ಟೆಂಬರ್ ನಲ್ಲಿ ಆಯೋಜನೆಯಾಗಿರುವ ಏಷ್ಯಾ ಕಪ್ ಪಂದ್ಯಾವಳಿಯ ವೇಳಾ ಪಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರು ಏಷ್ಯಾ ಕಪ್ ಪಂದ್ಯಾವಳಿಯ ವೇಳಾ ಪಟ್ಟಿಗೆ ಬಿಸಿಸಿಐ ಆಕ್ಷೇಪ ವ್ಯಕ್ತ ಪಡಿಸಿದ್ದು, ವೇಳಾಪಟ್ಟಿಯನ್ನು ಮೈಂಡ್‌ಲೆಸ್ (ತಲೆ ಇಲ್ಲದ ನಿರ್ಧಾರ) ಎಂದು ಜರಿದಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಗೊತ್ತು ಮಾಡಿದ ವೇಳಾಪಟ್ಟಿಯ ಬಗ್ಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನಾ ಕ್ವಾಲಿಫೈರ್ ಪಂದ್ಯವನ್ನು ನಿಗದಿಗೊಳಿಸಲಾಗಿದೆ. ಈ ವೇಳಾ ಪಟ್ಟಿ 'ಮೈಂಡ್‌ಲೆಸ್' ಆಗಿದ್ದು, ಎರಡು ದಿನ ಸತತವಾಗಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಇದನ್ನು ಯಾವ ಕಾರಣಕ್ಕೂ ಒಪ್ಪಲಾಗುವುದಿಲ್ಲ. ವೇಳಾಪಟ್ಟಿ ತಯಾರಿಸುವಾಗ ಸಮಾನವಾಗಿ ತಯಾರಿಸಬೇಕು ಎಂದು ಹೇಳಿದ್ದಾರೆ.
ಬಿಸಿಸಿಐ ಆಕ್ರೋಶಕ್ಕೆ ಕಾರಣವೇನು?
ಪ್ರಸ್ತುತ ಬಿಡುಗಡೆಯಾಗಿರುವ ವೇಳಾಪಟ್ಟಿಯಂತೆ ಪಾಕಿಸ್ತಾನ ಸೆಪ್ಟೆಂಬರ್ 16 ರಂದು ಕ್ವಾಲಿಫೈರ್ ಪಂದ್ಯ ಆಡಿ ಬಳಿಕ 19 ರಂದು ಭಾರತವನ್ನು ಎದುರಿಸಲಿದೆ. ಅಲ್ಲಿಗೆ ಪಾಕಿಸ್ತಾನಕ್ಕೆ ಮುಂದಿನ ಪಂದ್ಯಕ್ಕೆ 2 ದಿನಗಳ ಕಾಲಾವಕಾಶ ದೊರೆಯುತ್ತದೆ. ಆದರೆ ಅದೇ ಭಾರತದ ವಿಚಾರಕ್ಕೆ ಬಂದರೆ, ಭಾರತ ಸೆಪ್ಟೆಂಬರ್ 18 ರಂದು ಕ್ವಾಲಿಫೈರ್ ಪಂದ್ಯವನ್ನು ಆಡಿ ಮತ್ತೆ ಮರುದಿನವೇ ಅಂದರೆ ಸೆಪ್ಟೆಂಬರ್ 19 ಪಾಕಿಸ್ತಾನ ವಿರುದ್ಧ ಸೆಣಸಬೇಕು. ಭಾರತಕ್ಕೆ ಯಾವುದೇ ರೀತಿಯ ಕಾಲಾವಕಾಶವಿಲ್ಲ. ಹೀಗಾಗಿ ಬಿಸಿಸಿಐ ವೇಳಾಪಟ್ಟಿ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ವೇಳಾಪಟ್ಟಿ ಪರಿಷ್ಕರಿಸುವಂತೆ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್MumbaiಮುಂಬೈindiaಭಾರತPakistanಪಾಕಿಸ್ತಾನVirat Kohliವಿರಾಟ್ ಕೊಹ್ಲಿBCCIಬಿಸಿಸಿಐAsia Cup 2018ಏಷ್ಯಾ ಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


