ಭಾರತ-ಇಂಗ್ಲೆಂಡ್ ಮೂರನೇ ಏಕದಿನ: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ
ಭಾರತ-ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದ್ದು ಟಾಸ್ ಗೆದ್ದ ಆಂಗ್ಲ ಪಡೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

Published On :
ಲೀಡ್ಸ್(ಇಂಗ್ಲೆಂಡ್): ಭಾರತ-ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದ್ದು ಟಾಸ್ ಗೆದ್ದ ಆಂಗ್ಲ ಪಡೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಜಯ ಗಳಿಸಿದ್ದು ಈ ಪಂದ್ಯ ನಿರ್ಣಾಯಕ ಪಂದ್ಯವಾಗಿದೆ. ಒಂದು ವೇಳೆ ಟೀಂಇಂಡಿಯಾ ಈ ಪಂದ್ಯ ಗೆದ್ದದ್ದಾದರೆ ಸರಣಿ ಜಯವಷ್ಟೇ ಅಲ್ಲ ಕಳೆದ 3 ವರ್ಷಗಳಿಂದ ತಾನು ಮುಂದುವರೆಸಿಕೊಂಡು ಬಂದಿರುವ ದಾಖಲೆ ಉತ್ತಮ ಪಡಿಸಿಕೊಳ್ಳುವ ಮಹತ್ವದ ಅವಕಾಶ ತನ್ನದಾಗಿಸಿಕೊಳ್ಳಲಿದೆ.
ಇದೇ ವೇಳೆ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿನ ಗೆಲುವಿನಿಂದ ಇಂಗ್ಲೆಂಡ್ ತಂಡದ ಉತ್ಸಾಹ ಇಮ್ಮಡಿಯಾಗಿದ್ದು ಈ ಪಂದ್ಯವನ್ನೂ ಜಯಿಸಿ ನಂ.1 ಸ್ಥಾನಕ್ಕೆ ಇನ್ನಷ್ಟು ಸನಿಹಕ್ಕೆ ಬರಲು ಇಯಾನ್ ಮಾರ್ಗನ್ ಪಡೆ ಹವಣಿಸಿದೆ.
ಇತ್ತ ಕೊಹ್ಲಿ ಪಡೆ ಸಹ ಈ ಪಂದ್ಯ ಗೆಲ್ಲುವ ಮೂಲಕ ಮುಂದಿನ ವರ್ಷದ ವಿಶ್ವಕಪ್ ಗೆ ಉತ್ತಮ ಪೂರ್ವ ತಯಾರಿ ನಡೆಸುವ ಉಮೇದಿನಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


