ಕ್ರಿಕೆಟ್

ಭಾರತ ಬೌಲರ್‌ಗಳ ಬೆಂಡೆತ್ತಿದ ಆಂಗ್ಲರು; ಭಾರತಕ್ಕೆ ಗೆಲ್ಲಲು 323 ರನ್ ಗುರಿ

ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆಂಗ್ಲರು ಭಾರತೀಯ ಬೌಲರ್ ಗಳ ಬೆಂಡೆತ್ತಿದ್ದು ಭರ್ಜರಿ 322 ರನ್ ಕಲೆಹಾಕಿದ್ದಾರೆ...

ಭಾರತ ಬೌಲರ್‌ಗಳ ಬೆಂಡೆತ್ತಿದ ಆಂಗ್ಲರು; ಭಾರತಕ್ಕೆ ಗೆಲ್ಲಲು 323 ರನ್ ಗುರಿ
ಟೀಂ ಇಂಡಿಯಾ
Published On :
ಲಾರ್ಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆಂಗ್ಲರು ಭಾರತೀಯ ಬೌಲರ್ ಗಳ ಬೆಂಡೆತ್ತಿದ್ದು ಭರ್ಜರಿ 322 ರನ್ ಕಲೆಹಾಕಿದ್ದಾರೆ. 
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿದ್ದು ಟೀಂ ಇಂಡಿಯಾಗೆ ಗೆಲ್ಲಲು 323 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದ್ದಾರೆ. 
ಇಂಗ್ಲೆಂಡ್ ಪರ ಜೋಸನ್ ರಾಯ್ 40, ಬೈರ್ಸ್ಟೋವ್ 38, ಜೋ ರೂಟ್ ಅಜೇಯ 113, ಇಯಾನ್ ಮೋರ್ಗನ್ 53 ಮತ್ತು ವಿಲ್ಲಿ 50 ರನ್ ಬಾರಿಸಿದ್ದಾರೆ. 
ಭಾರತ ಪರ ಕುಲ್ದೀಪ್ ಯಾದವ್ 3, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.