ಕ್ರಿಕೆಟ್

ಆಂಗ್ಲರನ್ನು ಬಗ್ಗುಬಡಿಯಲು ಐಪಿಎಲ್ ನಮಗೆ ಉಪಯುಕ್ತವಾಗಿದೆ: ವಿರಾಟ್ ಕೊಹ್ಲಿ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸಿದ್ದು ಮೈದಾನದಲ್ಲಿ ಕಾವು ಹೆಚ್ಚಿಸಿತ್ತು. ಇದೀಗ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ...

ಆಂಗ್ಲರನ್ನು ಬಗ್ಗುಬಡಿಯಲು ಐಪಿಎಲ್ ನಮಗೆ ಉಪಯುಕ್ತವಾಗಿದೆ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published On :
ಮ್ಯಾಂಚೆಸ್ಟರ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸಿದ್ದು ಮೈದಾನದಲ್ಲಿ ಕಾವು ಹೆಚ್ಚಿಸಿತ್ತು. ಇದೀಗ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಹೈವೋಲ್ಟೆಜ್ ನಿಂದ ಕೂಡಿರಲಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಇಂಗ್ಲೆಂಡ್ ತಂಡದ ಹಲವು ಆಟಗಾರರು ಐಪಿಎಲ್ ನಲ್ಲಿ ಆಡಿರುವುದರಿಂದ ಅವರ ಬಲಾಬಲ ತಿಳಿಯಲು ಸಾಧ್ಯವಾಗಿದೆ. ಇದರಿಂದ ನಾವು ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯಲು ಸುಲಭವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ. 
ಐಪಿಎಲ್ ಪಂದ್ಯಾವಳಿಯ ವೇಳೆ ಹಲವು ಇಂಗ್ಲೆಂಡ್ ಆಟಗಾರರ ಜೊತೆ ಒಡನಾಟ ನಡೆಸಿದ್ದೇವೆ. ಅವರ ಮೈಂಡ್ ಸೆಟ್ ಹೇಗಿರಲಿದೆ ಎಂಬುದು ಮನವರಿಕೆಯಾಗಿದೆ. ನಾವು ಇಂದಿನ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು. 
ಜೋಸ್ ಬಟ್ಲರ್ ತಮ್ಮ ಅದ್ಭುತ ಪ್ರದರ್ಶನಕ್ಕೆ ಐಪಿಎಲ್ ಕಾರಣ. ಐಪಿಎಲ್ ಸಾಮರ್ಥ್ಯಕ್ಕೆ ತಕ್ಕ ವೇದಿಕೆ ಆಗಿತ್ತು ಎಂದಿದ್ದರು. ಇದನ್ನು ಪ್ರಸ್ತಾಪಿಸಿದ ವಿರಾಟ್ ಕೊಹ್ಲಿ ಜೋಸ್ ಬಟ್ಲರ್ ತನ್ನ ಸಾಮರ್ಥ್ಯವನ್ನು ತಿಳಿಯಲು ಐಪಿಎಲ್ ನಿಂದ ಸಾಧ್ಯವಾಯಿತು. ಈ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಇನ್ನು ಇವರ ಜೊತೆಗೆ ಹಿಂದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದಕ್ಕೆ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ. 
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂದಿನಿಂದ ಸರಣಿಯನ್ನು ಆರಂಭಿಸಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ನಂತರ ಏಕದಿನ ಸರಣಿ ಆ ಬಳಿಕ ಟೆಸ್ಟ್ ಸರಣಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.