ಕ್ರಿಕೆಟ್

2018 ಐಪಿಎಲ್ ಹರಾಜು: ಡೇರ್ ಡೆವಿಲ್ಸ್ ಗೆ ಪೃಥ್ವಿ ಶಾ, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್ ಕೆಕೆಆರ್ ಪಾಲು

ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿದೆ.

2018 ಐಪಿಎಲ್ ಹರಾಜು: ಡೇರ್ ಡೆವಿಲ್ಸ್ ಗೆ ಪೃಥ್ವಿ ಶಾ, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್ ಕೆಕೆಆರ್ ಪಾಲು
ಐಪಿಎಲ್ ಹರಾಜು
Published On :
ಬೆಂಗಳೂರು: ಐಪಿಎಲ್ 2018 ರ ಹರಾಜು ಪ್ರಕ್ರಿಯೆಯಲ್ಲಿ ಅಂಡರ್ 19 ಆಟಗಾರರು ಡೆಲ್ಲಿ ಡೇರ್ ಡೆವಿಲ್ಸ್, ಕೆಕೆಆರ್ ತಂಡದ ಪಾಲಾಗಿದ್ದಾರೆ. 
ಜ.27 ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂಡರ್ 19 ತಂಡದ ಆಟಗಾರ, ಭಾರತ ತಂಡದ ನಾಯಕ ಪೃಥ್ವಿ ಶಾ, 1.2 ಕೋಟಿ ರೂಪಾಯಿಗೆ ದೆಹಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದರೆ, ಅಂಡರ್-19 ನ ಮತ್ತೋರ್ವ ಆಟಗಾರ ಕಮಲೇಶ್ ನಾಗರ್ಕೋಟಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಸನ್ ರೈಸರ್ಸ್ ಹಾಗೂ ಪಂಜಾಬ್ ನಡುವೆ ಪೈಪೋಟಿ ನಡೆದು ಕೊನೆಗೆ ಕೆಕೆಆರ್ ತಂಡ ಕಮಲೇಶ್ ನಾಗರ್ಕೋಟಿಯನ್ನು ಖರೀದಿಸಿದೆ. ಮತ್ತೋರ್ವ ಅಂಡರ್-19 ತಂಡದ ಸ್ಫೋಟಕ ಆಟಗಾರ ಶುಭ್ಮನ್ ಗಿಲ್ ನ್ನು 1.8 ಕೋಟಿಗೆ ಕೆಕೆಆರ್ ತಂಡ ಖರೀದಿಸಿದೆ.   
ಇನ್ನು ಇದೇ ವೇಳೆ ಕರ್ನಾಟಕ ತಂಡದ ಪ್ರಾರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಒಂದು ಕೋಟಿ ರೂಪಾಯಿಗೆ ಮುಂಬೈ ತಂಡದ ಪಾಲಾಗಿದ್ದು, ರಿಕಿ ಭುಯಿ 20 ಲಕ್ಷಕ್ಕೆ ಸನ್ ರೈಸರ್ಸ್ ತಂಡದ ಪಾಲಾಗಿದ್ದರೆ ಕುಲ್ದೀಪ್ ಯಾದವ್ 5.8 ಕೋಟಿಗೆ ಕೆಕೆಆರ್ ತಂಡದಲ್ಲೇ ಉಳಿದಿದ್ದಾರೆ. 
2018 ಐಪಿಎಲ್ ಹರಾಜು: ಪಂಜಾಬ್ ಪಾಲಾದ ಕೆಎಲ್ ರಾಹುಲ್, ಕರುಣ್ ನಾಯರ್
ಕರ್ನಾಟಕದ ಆಟಗಾರರಾದ ಕಎಲ್ ರಾಹುಲ್ ಮತ್ತು ಕರುಣ್ ನಾಯರ್ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ. ಕೆಎಲ್ ರಾಹುಲ್ ಅವರಿಗೆ 11 ಕೋಟಿ ಹಾಗೂ ಕರುಣ್ ನಾಯರ್ ಅವರಿಗೆ 5.6 ಕೋಟಿ ನೀಡಿ ಪಂಜಾಬ್ ಖರೀದಿಸಿದೆ. 
ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರಾರಂಭವಾಗಿದೆ. 
2008ರ ಐಪಿಎಲ್ ಬಳಿಕ ಇಷ್ಟು ದೊಡ್ಡಮಟ್ಟದ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ. ರಾಜಸ್ತಾನ ತಂಡ ಸ್ಟೋಕ್ಸ್ ಗೆ ಬರೋಬ್ಬರಿ 12.5 ಕೋಟಿ ರುಪಾಯಿ ಹರಾಜು ಕೋರಿ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ 5.2 ಕೋಟಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ. 
ತಂಡಕ್ಕೆ ಹರಾಜಾದ ಆಟಗಾರರ ಪಟ್ಟಿ:
* ಆರ್ ಅಶ್ವಿನ್ - 7.6 ಕೋಟಿ -ಪಂಜಾಬ್ 
* ದಕ್ಷಿಣ ಆಫ್ರಿಕಾದ ಡುಪ್ಲೇಸಿಸ್ - 1.6 ಕೋಟಿ -ಚೆನ್ನೈ ಸೂಪರ್ ಕಿಂಗ್ಸ್
* ಅಜಿಂಕ್ಯ ರಹಾನೆ - 4 ಕೋಟಿ - ರಾಜಸ್ತಾನ
* ಮಿಚೆಲ್ ಸ್ಟಾರ್ಕ್ - 9.4 ಕೋಟಿ - ಕೋಲ್ಕತ್ತಾ ನೈಟ್ ರೈಡರ್ಸ್
* ಹರ್ಭಜನ್ ಸಿಂಗ್ 2 ಕೋಟಿ -ಮುಂಬೈ
* ಶಕೀಬ್ ಅಲ್ ಹಸನ್ - 2 ಕೋಟಿ -ಸನ್ ರೈಸರ್ಸ್ ಹೈದರಾಬಾದ್
* ಗ್ಲೇನ್ ಮ್ಯಾಕ್ಸ್ ವೆಲ್ - 9 ಕೋಟಿ - ಡೆಲ್ಲಿ
* ಗೌತಮ್ ಗಂಭೀರ್ - 2.8 ಕೋಟಿ -ಡೆಲ್ಲಿ
* ಕೇನ್ ವಿಲಿಯಮ್ಸನ್ - 3 ಕೋಟಿ -ಸನ್ ರೈಸರ್ಸ್ ಹೈದರಾಬಾದ್ 
* ಯುವರಾಜ್ ಸಿಂಗ್ - 2 ಕೋಟಿ -ಪಂಜಾಬ್
* ಕರುಣ್ ನಾಯರ್ - 5.6 ಕೋಟಿ -ಪಂಜಾಬ್
* ಕೆಎಲ್ ರಾಹುಲ್ - 11 ಕೋಟಿ -ಪಂಜಾಬ್
* ಡೇವಿಡ್ ಮಿಲ್ಲರ್ - 3 ಕೋಟಿ - ಪಂಜಾಬ್
* ಅರೋನ್ ಪಿಂಚ್ - 6.2 ಕೋಟಿ -ಪಂಜಾಬ್
* ಬ್ರೆಂಡನ್ ಮೆಕ್ಕಲಮ್ - 3.6 ಕೋಟಿ -ಆರ್ಸಿಬಿ
* ಜೋಸನ್ ರಾಯ್ - 1.5 ಕೋಟಿ -ಡೆಲ್ಲಿ
* ಕ್ರಿಸ್ ಲಿನ್ - 9.6 ಕೋಟಿ -ಕೋಲ್ಕತ್ತಾ
* ಮನೀಶ್ ಪಾಂಡೆ - 11 ಕೋಟಿ - ಸನ್ ರೈಸರ್ಸ್ ಹೈದರಾಬಾದ್
* ಕ್ರಿಸ್ ವೋಕ್ಸ್ - 7.4 ಕೋಟಿ -ಆರ್ಸಿಬಿ
* ಕಾರ್ಲೋಸ್ ಬ್ರಾಥ್ವೈಟ್ - 2 ಕೋಟಿ -ಪಂಜಾಬ್
* ಶೇನ್ ವಾಟ್ಸನ್ - 4 ಕೋಟಿ - ಚೆನ್ನೈ
* ಕೇದಾರ್ ಜಾದವ್ -7.8 ಕೋಟಿ - ಚೆನ್ನೈ
* ಕೊಲಿನ್ ಡಿ ಗ್ರಾಂಡ್ ಹೋಮೆ -2.2 ಕೋಟಿ -ಆರ್ಸಿಬಿ
* ಯುಸೂಫ್ ಪಠಾಣ್ - 1.9 ಕೋಟಿ -ಸನ್ ರೈಸರ್ಸ್ ಹೈದರಾಬಾದ್ 
* ಕೋಲಿನ್ ಮನ್ರೋ -1.9 ಕೋಟಿ - ಡೆಲ್ಲಿ
* ಸ್ಟುವರ್ಟ್ ಬಿನ್ನಿ - 50 ಲಕ್ಷ - ರಾಜಸ್ತಾನ
* ಮಾರ್ಕಸ್ ಸ್ಟೊಯಿನಿಸ್ -6.2 ಕೋಟಿ - ಪಂಜಾಬ್
* ಮೋಹಿನ್ ಅಲಿ -1.7 ಕೋಟಿ -ಆರ್ಸಿಬಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.