ವಿನಯ್ ಕುಮಾರ್ ಕರ್ನಾಟಕದ ಜಾಂಟಿ ರೋಡ್ಸ್!
ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಸಯ್ಯದ್ ಮುಷ್ತಕ್ ಅಲಿ ಟಿ20 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಸ್ಟೈಲ್ ನಲ್ಲೇ...

Published On :
ಹೈದರಾಬಾದ್: ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಸಯ್ಯದ್ ಮುಷ್ತಕ್ ಅಲಿ ಟಿ20 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಸ್ಟೈಲ್ ನಲ್ಲೇ ಎದುರಾಳಿಯ ರನೌಟ್ ಮಾಡಿ ಮಿಂಚಿದ್ದಾರೆ.
ಜಾಂಟಿ ರೋಡ್ಸ್ 1992ರ ವಿಶ್ವಕಪ್ ನಲ್ಲಿ ಪಾಕ್ ಆಟಗಾರ ಇಂಜಿಮಾಮ್ ಉಲ್ ಹಕ್ ರನ್ನು 31ನೇ ಓವರ್ ನಲ್ಲಿ ರನೌಟ್ ಮಾಡಿದ್ದರು. ಅದೇ ರೀತಿ ವಿನಯ್ ಕುಮಾರ್ ಅವರು ಇದೀಗ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಂಜಾಬ್ ತಂಡದ ಆಟಗಾರರನ್ನು ರನೌಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯ್ ಕುಮಾರ್ ಟೀಂ ಇಂಡಿಯಾ ಪರವಾಗಿ 31 ಏಕದಿನ ಪಂದ್ಯ ಆಡಿದ್ದು ಅದರಲ್ಲಿ 38 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
Hi coach @JontyRhodes8 after watching your 1992 World Cup runout video many times, I was waiting for such opportunity. So, today I finally got it. How’s that coach ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Vinay Kumarವಿನಯ್ ಕುಮಾರ್Jonty Rhodesಜಾಂಟಿ ರೋಡ್ಸ್Syed Mushtaq Ali T20ಸಯ್ಯದ್ ಮುಷ್ತಕ್ ಅಲಿ ಟಿ20
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


