ಅಂತಿಮ ಟಿ20ಯಲ್ಲಿ ಭಾರತಕ್ಕೆ 7 ರನ್ ಗಳ ಜಯ, 2-1ರಿಂದ ಸರಣಿ ಕೈವಶ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಾವಳಿಯಲ್ಲಿ ಭಾರತ ಏಳು ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ಜಯ ಸಾಧಿಸಿದೆ
Published On :
ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಾವಳಿಯಲ್ಲಿ ಭಾರತ ಏಳು ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಭಾರತಕ್ಕೆ 2-1 ಅಂತರದಲ್ಲಿ ಸರಣಿ ಒಲಿದಿದೆ ಇದರೊಡನೆ ಏಕದಿನದ ಬಳಿಕ ಟಿ20 ಸರಣಿಯನ್ನೂ ಭಾರತ ತನ್ನ ಕೈವಶ ಮಾಡಿಕೊಂಡಂತಾಗಿದೆ.
ಅತಿಥೇಯರ ಪರ ಆಫ್ರಿಕಾ ನಾಯಕ ಡುಮಿನಿ 55 ರನ್ ಗಳಿಸಿದರೆ ಕ್ರಿಸ್ಟಿಯಾನ್ ಜೋಂಕರ್ 49 ರನ್ ಸಿಡಿಸಿದ್ದರು. ಇನ್ನು ಡೇವಿಡ್ ಮಿಲ್ಲರ್ 24, ಫಾರನ್ ಬೆಹಾರ್ಡಿಯನ್ 15 ರನ್ ಗಳಿಸಿದ್ದರು. ಒಟ್ಟಾರೆ ದಕ್ಷಿಣ ಆಫ್ರಿಕಾ ತಾನು ನಿಗದಿತ ಓವರ್ ಗಳಲ್ಲಿ 65/6 ರನ್ ಗಳಿಸಲಷ್ಟೇ ಸಾಧ್ಯವಾಗುತ್ತದೆ.
ಭಾರತದ ಪರ ಭುವನೇಶ್ವರ ಕುಮಾರ್ ಎರಡು ವಿಕೆಟ್ ಪಡೆದು ಮಿಂಚಿದರು.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುರೇಶ್ ರೈನಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಭುವನೇಶ್ವರ ಕುಮಾರ್ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaದಕ್ಷಿಣ ಆಫ್ರಿಕಾSouth AfricaBhuvneshwar KumarSuresh Rainaಸುರೇಶ್ ರೈನಾಟಿ 20ಭುವನೇಶ್ವರ ಕುಮಾರ್T20. ಭಾರತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

