ಅಂಡರ್ 19ಗೆ ಆಯ್ಕೆಯಾಗಲಿಲ್ಲ ಎಂದು ಮನನೊಂದು ಯುವ ಕ್ರಿಕೆಟಿಗ ಆತ್ಮಹತ್ಯೆಗೆ ಶರಣು!
ಅಂಡರ್-19 ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಮನನೊಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್ ಅವರ ಪುತ್ರ ಮೊಹಮ್ಮದ್ ಜರ್ಯಾಬ್...

Published On :
ಇಸ್ಲಾಮಾಬಾದ್: ಅಂಡರ್-19 ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಮನನೊಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್ ಅವರ ಪುತ್ರ ಮೊಹಮ್ಮದ್ ಜರ್ಯಾಬ್ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೊಹಮ್ಮದ್ ಜರ್ಯಾಬ್ ಮೊದಲ ವರ್ಷ ಪದವಿ ವಿದ್ಯಾರ್ಥಿಯಾಗಿದ್ದು ಕರಾಚಿ ಅಂಡರ್ 19 ತಂಡದ ಪರ ಆಡುತ್ತಿದ್ದರು. ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಗುಣಮುಖರಾದ ಬಳಿಕ ತಂಡಕ್ಕೆ ಮರು ಆಯ್ಕೆ ಬಯಸಿದಾಗ ಆತನನ್ನು ಆಯ್ಕೆ ಮಾಡಲಿಲ್ಲ. ಇದರಿಂದ ಮನನೊಂದ ಮೊಹಮ್ಮದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ಹನೀಫ್ ಆರೋಪಿಸಿದ್ದಾರೆ.
ಅಮೀರ್ ಹನೀಫ್ 90ರ ದಶಕದಲ್ಲಿ ಪಾಕಿಸ್ತಾನ ಪರ 5 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


