ಶೂ ಧರಿಸಿ ಇನ್ನೂ ವೇಗವಾಗಿ ಓಡಬಹುದು ಎಂದ ಗಿಬ್ಸ್ ಗೆ ಅಶ್ವಿನ್ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?
ಭಾರತದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರ ಕಾಲೆಳೆಯಲು ಹೋಗಿ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಹರ್ಷಲ್ ಗಿಬ್ಸ್ ಮುಖಭಂಗಕ್ಕೀಡಾಗಿದ್ದಾರೆ.

Published On :
ನವದೆಹಲಿ: ಭಾರತದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರ ಕಾಲೆಳೆಯಲು ಹೋಗಿ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಹರ್ಷಲ್ ಗಿಬ್ಸ್ ಮುಖಭಂಗಕ್ಕೀಡಾಗಿದ್ದಾರೆ.
ಹೌದು.. ಭಾರತದ ಆರ್ ಅಶ್ವಿನ್ ಹಾಗೂ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಹರ್ಷಲ್ ಗಿಬ್ಸ್ ನಡುವೆ ಸೋಮವಾರ ಟ್ವೀಟ್ ಸಮರ ತಾರಕಕ್ಕೇರಿತ್ತು. ಶೂ ಬ್ರ್ಯಾಂಡ್ ವೊಂದರ ಪ್ರಚಾರ ರಾಯಭಾರಿಯಾಗಿರುವ ಅಶ್ವಿನ್ ತಮ್ಮ ಹೊಸ ಬ್ರ್ಯಾಂಡ್ ಶೂ ಕುರಿತು ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. 'ಈ ಶೂ ಹಾಕಿಕೊಂಡರೆ ಚುರುಕಾಗಿ ಓಡಬಹುದು' ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹರ್ಷಲ್ ಗಿಬ್ಸ್, ‘ಇನ್ನು ಮುಂದಾದರೂ ನೀವು ಅಂಗಳದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಮೊದಲಿಗಿಂತಲೂ ತುಸು ವೇಗವಾಗಿ ಓಡಬಹುದೇನೊ ಅಲ್ಲವೇ ಅಶ್ವಿನ್’ ಎಂದು ವ್ಯಂಗ್ಯ ಮಾಡಿದ್ದರು. ಗಿಬ್ಸ್ ಅವರ ಈ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅಶ್ವಿನ್, 'ಹೌದು...ನಿಮ್ಮಷ್ಟು ವೇಗವಾಗಿ ಖಂಡಿತವಾಗಿಯೂ ಓಡಲಾಗುವುದಿಲ್ಲ. ಆ ಅದೃಷ್ಟ ನನಗಿಲ್ಲ. ಅದರೆ ಫಿಕ್ಸಿಂಗ್ ನಿಂದ ಹಣ ಗಳಿಸಿ ಬದುಕು ಸಾಗಿಸುವ ದುರ್ಗತಿ ಖಂಡಿತವಾಗಿಯೂ ಬಂದಿಲ್ಲ. ನಾನು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಗಿಬ್ಸ್ ಒಂದು ತಮಾಷೆಯನ್ನು ತಮಾಷೆಯಾಗಿ ಸ್ವೀಕರಿಸಲಾಗಲಿಲ್ಲವೇ ಎಂದು ಪ್ರತಿಕ್ರಿಯೆ ನೀಡಿದ್ದರು, ಇದ್ದಕೆ ಉತ್ತರಿಸಿದ ಅಶ್ವಿನ್ ನಾನು ಮಾಡಿದ್ದೂ ಕೂಡ ತಮಾಷೆಯೇ..ಆದರೆ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆಯೇ ಅದು ಹಾಗೆ ಕಾಣುತ್ತದೆ. ನೀವು ಇದನ್ನು ತಪ್ಪಾಗಿ ಗ್ರಹಿಸಿದಿರಿ ಅನಿಸುತ್ತದೆ. ಇದನ್ನು ಇಲ್ಲಿಯೇ ಬಿಟ್ಟುಬಿಡಿ. ಮುಂದೆ ಎಂದಾದರೂ ಭೇಟಿಯಾದಾಗ ಜೊತೆಗೆ ಕುಳಿತು ಊಟ ಮಾಡೋಣಾ’ ಎಂದು ಟ್ವೀಟ್ ಮಾಡಿದ್ದಾರೆ.
2001ರಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಗಿಬ್ಸ್ ಭಾಗಿಯಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅವರನ್ನು ಅಮಾನತು ಮಾಡಿತ್ತು.
Hopefully you will be able to run a bit faster now ashwin
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


