ಕ್ರಿಕೆಟ್

ಮೂರನೇ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ಫೋಟೋ ವೈರಲ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಂದು ಮದೆವೆಯಾಗಿದ್ದು, ಪಂಜಾಬ್‌ ಪ್ರಾಂತ್ಯದ ಮನೇಕಾ ಮನೆತನದ ವಧುವಿನೊಂದಿಗೆ ಇಮ್ರಾನ್ ಮೂರನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.

ಮೂರನೇ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ಫೋಟೋ ವೈರಲ್!
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇಮ್ರಾನ್ ಖಾನ್ ಮದುವೆ ಫೋಟೋ
Published On :
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಂದು ಮದೆವೆಯಾಗಿದ್ದು, ಪಂಜಾಬ್‌ ಪ್ರಾಂತ್ಯದ ಮನೇಕಾ ಮನೆತನದ ವಧುವಿನೊಂದಿಗೆ  ಇಮ್ರಾನ್ ಮೂರನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೇ ಇಮ್ರಾನ್ ಖಾನ್ ಮದುವೆ ವಿಚಾರ ಮಾಧ್ಯಮಗಳಲ್ಲಿ ಹರಿದಾಡಿತ್ತಾದರೂ ಈ ಬಗ್ಗೆ ಪಿಟಿಐ ಆಗಲೀ ಅಥವಾ ಇಮ್ರಾನ್ ಖಾನ್ ಕುಟುಂಬಸ್ಥರಾಗಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಪಾಕಿಸ್ತಾನಿ ಮಾಧ್ಯಮಗಳು ಇಮ್ರಾನ್  ಖಾನ್ ಮದುವೆ ಕುರಿತು ವರದಿ ಬಿತ್ತರಿಸಿವೆ. ಪಂಜಾಬ್‌ ಪ್ರಾಂತ್ಯದ ಮನೇಕಾ ಮನೆತನದ ವಧುವನ್ನು 63 ವರ್ಷದ ಇಮ್ರಾನ್‌ ಅವರು ಲಂಡನ್‌ನಲ್ಲಿ ವಿವಾಹವಾಗಿದ್ದಾರೆ. ಇಮ್ರಾನ್‌ ಅವರು ಈ ಮೊದಲು ಇಬ್ಬರು ಪತ್ನಿಯರಿಗೆ  ತಲಾಕ್‌ (ವಿಚ್ಛೇದನ) ನೀಡಿದ್ದರು. ಇಮ್ರಾನ್‌ ಮದುವೆಯಾಗಿರುವ ಮಹಿಳೆಯ ಹೆಸರು ಮರಿಯಮ್‌ ಎಂದು ಜಿಯೊ ಟಿವಿ ವರದಿ ಮಾಡಿದೆ.
ಸ್ಪಷ್ಟನೆ ನೀಡಿದ ಪಿಟಿಐ
ಇನ್ನು ಇಮ್ರಾನ್‌ ಖಾನ್‌ ಅವರು ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಪಕ್ಷ ಸ್ಪಷ್ಟನೆ ನೀಡಿದ್ದು,  ಈ ಬಗ್ಗೆ ಮಾತನಾಡಿರುವ ಪಕ್ಷದ ವಕ್ತಾರ ಫವಾದ್ ಚೌದರಿ, ಬುಷ್ರಾ  ಮನೆತನದ 40 ವರ್ಷದ ಬುಷ್ರಾ ಮನೇಕಾ ಅವರನ್ನು ಇಮ್ರಾನ್ ಖಾನ್ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಮನೇಕಾ ವೃತ್ತಿಯಲ್ಲಿ ಧಾರ್ಮಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
1995ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್‌ (ಜೆಮಿಮಾ ಖಾನ್‌) ಅವರನ್ನು ಮದುವೆಯಾಗಿದ್ದ ಇಮ್ರಾನ್‌ 2004ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ಹೋದ ವರ್ಷ ಅವರು ಬಿಬಿಸಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಾಮ್‌ ಖಾನ್‌  ಅವರನ್ನು ವರಿಸಿದ್ದರು . ಇಬ್ಬರ ನಡುವಣ ದಾಂಪತ್ಯ ಒಂದೇ ವರ್ಷದಲ್ಲಿ ಮುರಿದುಬಿದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.