ಪೋರ್ಟ್ ಎಲಿಜಬೆತ್ ಪಿಚ್‌ನಲ್ಲಿ ಎಂದೂ ಗೆಲ್ಲದ ಟೀಂ ಇಂಡಿಯಾಗೆ ಈ ಬಾರಿ ವಿಜಯಮಾಲೆ ದಕ್ಕುತ್ತಾ?
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯ ಐದನೇ ಪಂದ್ಯ ಪೋರ್ಟ್ ಎಲಿಜಬೆತ್ ನಲ್ಲಿ ಆಡಲಿದ್ದು ನಾಯಕ ವಿರಾಟ್ ಕೊಹ್ಲಿ...

Published On :
ಫೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯ ಐದನೇ ಪಂದ್ಯ ಪೋರ್ಟ್ ಎಲಿಜಬೆತ್ ನಲ್ಲಿ ಆಡಲಿದ್ದು ನಾಯಕ ವಿರಾಟ್ ಕೊಹ್ಲಿ ಪಡೆಗೆ ನಾಳಿನ ಪಂದ್ಯ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿದೆ.
ಪೋರ್ಟ್ ಎಲಿಜಬೆತ್ ಮೈದಾನದಲ್ಲಿ ಇಲ್ಲಿಯವರೆಗೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿಲ್ಲ. ಈ ಹಿಂದೆ ಟೀಂ ಇಂಡಿಯಾ ಪೋರ್ಟ್ ಎಲಿಜಬೆತ್ ಕ್ರೀಡಾಂಗಣದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದ ಅವುಗಳಲ್ಲಿ ಯಾವ ಪಂದ್ಯವನ್ನು ಗೆದ್ದಿರಲಿಲ್ಲ.
ನಾಳಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ ಜಯದೊಂದಿಗೆ ಹೊಸ ದಾಖಲೆಯನ್ನು ವಿರಾಟ್ ಕೊಹ್ಲಿ ಪಡೆ ನಿರ್ಮಿಸಿದಂತಾಗುತ್ತದೆ. ಈ ಮೈದಾನದಲ್ಲಿ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಎಂಎಸ್ ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದರು.
ದುರುದೃಷ್ಟಕರ ಸಂಗತಿಯೆಂದರೆ ಈ ನಾಲ್ಕು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಸೋಲು ಕಂಡಿದೆ. ಇನ್ನು ತಂಡ ಒಮ್ಮೆಯೂ 200 ರನ್ ಗಳ ಗಡಿ ದಾಟಿಲ್ಲ. ಅಜರುದ್ದೀನ್ ನೇತೃತ್ವದಲ್ಲಿ ಟೀಂ ಇಂಡಿಯಾ 147 ರನ್ ಬಾರಿಸಿದ್ದೆ ಗರಿಷ್ಠ ರನ್ ಆಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿದಕ್ಷಿಣ ಆಫ್ರಿಕಾSouth AfricaPort Elizabethಪೋರ್ಟ್ ಎಲಿಜಬೆತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


