ಕ್ರಿಕೆಟ್

ಇದೇ ರೀತಿಯ ಬೌಲಿಂಗ್ ದಾಳಿ ಇದ್ದಲ್ಲಿ ಪ್ರತಿ ಟೆಸ್ಟ್ ನಲ್ಲೂ 20 ವಿಕೆಟ್ ಕಬಳಿಸಬಹುದು- ರಾಹುಲ್ ದ್ರಾವಿಡ್

ಪ್ರಸ್ತುತ ಟೀಂ ಇಂಡಿಯಾ ಬೌಲಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರೆಸಿದ್ದಲ್ಲಿ ಪ್ರತಿ ಟೆಸ್ಟ್ ನಲ್ಲಿ 20 ವಿಕೆಟ್ ಕಬಳಿಸಬಹುದು ಎಂದು ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಇದೇ ರೀತಿಯ ಬೌಲಿಂಗ್ ದಾಳಿ ಇದ್ದಲ್ಲಿ ಪ್ರತಿ ಟೆಸ್ಟ್ ನಲ್ಲೂ  20 ವಿಕೆಟ್  ಕಬಳಿಸಬಹುದು- ರಾಹುಲ್ ದ್ರಾವಿಡ್
ಸಂಗ್ರಹ ಚಿತ್ರ
Published On :

ಚೆನ್ನೈ : ಪ್ರಸ್ತುತ ಟೀಂ ಇಂಡಿಯಾ ಬೌಲಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರೆಸಿದ್ದಲ್ಲಿ  ಪ್ರತಿ ಟೆಸ್ಟ್ ನಲ್ಲಿ 20 ವಿಕೆಟ್ ಕಬಳಿಸಬಹುದು ಎಂದು ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಬೌಲರ್ ಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಪ್ರದರ್ಶನ ನಿರಂತರವಾಗಿ ಮುಂದುವರೆಯಬೇಕು. ಹಾಗೆ ಮುಂದುವರೆದರೆ  ಪ್ರತಿ ಟೆಸ್ಟ್ ನಲ್ಲೂ 20 ವಿಕೆಟ್  ಗಳಿಸಬಹುದು .ಪಾಸ್ಟ್ ಬೌಲಿಂಗ್ ಯಾವಾಗಾಲೂ ಸದೃಢವಾಗಿ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಎ ಹಾಗೂ 19 ವರ್ಷದೊಳಗಿನ ತಂಡದ ತರಬೇತು ದಾರರಾಗಿರುವ ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ್ ಅವರ ಅದ್ಬುತ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸರಣಿಯಲ್ಲಿ ಚೇತೇಶ್ವರ್ ಪೂಜಾರ್  ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿಯೂ  ಉತ್ತಮ ರೀತಿಯಲ್ಲಿ ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾ ಗೆಲ್ಲಲು ಪ್ರಮುಖವಾದ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.