ಕ್ರಿಕೆಟ್

ಮಾಯಾಂಕ್ ಕ್ಯಾಂಟಿನ್ ಸಿಬ್ಬಂದಿ, ಹೊಟೇಲ್ ವೈಟರ್ ಮೇಲೆ ತ್ರಿಶತಕ ಸಿಡಿಸಿದ್ದ: ಆಸೀಸ್ ಕೀಫೆಗೆ ಮಂಗಳಾರತಿ!

ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಕನ್ನಡಿಗ ಮಾಯಾಂಕ್ ಅಗರವಾಲ್ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದು ಮೊದಲ ಪಂದ್ಯದಲ್ಲೇ...

ಮಾಯಾಂಕ್ ಕ್ಯಾಂಟಿನ್ ಸಿಬ್ಬಂದಿ, ಹೊಟೇಲ್ ವೈಟರ್ ಮೇಲೆ ತ್ರಿಶತಕ ಸಿಡಿಸಿದ್ದ: ಆಸೀಸ್ ಕೀಫೆಗೆ ಮಂಗಳಾರತಿ!
ಕೆರ್ರಿ ಒ ಕೇಫಿ-ಮಾಯಾಂಕ್ ಅಗರವಾಲ್
Published On :
ಮೆಲ್ಬರ್ನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಕನ್ನಡಿಗ ಮಾಯಾಂಕ್ ಅಗರವಾಲ್ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದು ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಇನ್ನು ಮಾಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಜನಾಂಗೀಯ ನಿಂದನೆ ಮಾಡಿದ್ದು ಇದಕ್ಕೆ ಟ್ವೀಟರಿಗರು ಕಿಡಿಕಾರಿದ್ದಾರೆ.
ಮಾಯಾಂಕ್ ಅಗರವಾಲ್ ದೇಸಿ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿರೋದು ಯಾವುದೋ ಕ್ಯಾಂಟಿನ್ ಸಿಬ್ಬಂದಿ ಅಥವಾ ಹೊಟೇಲ್ ವೈಟರ್ ವಿರುದ್ಧ ಎಂದು ಅವಮಾನ ಮಾಡಿದ್ದರು. ಇದಕ್ಕೆ ಟ್ವೀಟರಿಗರು ಆಕ್ರೋಶಗೊಂಡಿದ್ದು ಕೇಫೆಗೆ ಮಂಗಳಾರತಿ ಮಾಡಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಕ್ರಿಕೆಟರುಗಳಾದ ಶೇನ್ ವಾರ್ನ್ ಮತ್ತು ಮಾರ್ಕ್ ವ್ಹಾ ಅವರೊಂದಿಗೆ ಫೋಕ್ಸ್ ಸ್ಪೋರ್ಟ್ ಚಾನೆಲ್ ಗೆ ಕಮೆಂಟ್ರಿ ನೀಡುತ್ತಿದ್ದ ಕೆರಿ ಓ ಕೀಫೆ ಈ ರೀತಿಯ ಅಸಂಬದ್ಧ ಹೇಳಿಕೆಯನ್ನು ನೀಡಿದ್ದರು. 
ಮಾಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರ ಫಸ್ಟ್ ಕ್ಲಾಸ್ ಕೆರಿಯರ್ ಸಾಧನೆಯನ್ನು ತೋರಿಸಲಾಗಿತ್ತು. ಅದರಲ್ಲಿ ಇತ್ತೀಚೆಗೆ ನಡೆದ ರಣಜಿ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಅಂಕಿ ಅಂಶಗಳನ್ನು ನೋಡಿ ಕಮೆಂಟ್ರಿ ನೀಡುತ್ತಿದ್ದಾಗ ಮಾಯಾಂಕ್ ರನ್ನು ನಿಂದಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.