ಕ್ರಿಕೆಟ್

ಸತತ ವೈಫಲ್ಯ ರಾಹುಲ್, ವಿಜಯ್ ಗೆ ಗೇಟ್ ಪಾಸ್; 3ನೇ ಟೆಸ್ಟ್ ಗೆ ಟೀಂ ಇಂಡಿಯಾ ಪ್ರಕಟ

ಮೆಲ್ಬರ್ನ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಸತತ ವೈಫಲ್ಯ ಕಾಣುತ್ತಿರುವ ಕೆ.ಎಲ್. ರಾಹುಲ್ ಹಾಗೂ ವಿಜಯ್ ಗೆ ಗೇಟ್ ಪಾಸ್ ನೀಡಲಾಗಿದೆ.

ಸತತ ವೈಫಲ್ಯ ರಾಹುಲ್, ವಿಜಯ್ ಗೆ ಗೇಟ್ ಪಾಸ್; 3ನೇ ಟೆಸ್ಟ್ ಗೆ ಟೀಂ ಇಂಡಿಯಾ ಪ್ರಕಟ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮೆಲ್ಬರ್ನ್ ನಲ್ಲಿ  ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ  ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಸತತ ವೈಫಲ್ಯ ಕಾಣುತ್ತಿರುವ ಕೆ.ಎಲ್. ರಾಹುಲ್ ಹಾಗೂ ವಿಜಯ್ ಗೆ ಗೇಟ್ ಪಾಸ್ ನೀಡಲಾಗಿದೆ.

 ಗಾಯದಿಂದ ಸಮಸ್ಯೆಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಹಾಗೂ ಆಲ್ ರೌಂಡರ್  ರವೀಂದ್ರ ಜಡೇಜಾ ತಂಡಕ್ಕೆ ವಾಪಾಸ್ಸಾಗಲಿದ್ದಾರೆ.  ಮಯಾಂಕ್ ಅಗರ್ ವಾಲ್  ಚೊಚ್ಚಲ ಟೆಸ್ಟ್ ಪಂದ್ಯ ಆಡಲಿದ್ದಾರೆ.

 ಕೆ.ಎಲ್. ರಾಹುಲ್ ಹಾಗೂ ಮುರಳಿ ವಿಜಯ್  ಎರಡು ಟೆಸ್ಟ್ ಪಂದ್ಯಗಳ 8 ಇನ್ಸಿಂಗ್ಸ್ ನಲ್ಲಿ ಕೇವಲ 95 ರನ್ ಗಳಿಸಿದ್ದಾರೆ.ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರಿಗೆ ಉತ್ತಮ ಸಾಥ್ ನೀಡುವಲ್ಲಿಯೂ ಇವರು ವಿಫಲವಾಗಿದ್ದು, ಮೂರನೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ  ಮಯಾಂಕ್ ಅಗರ್ ವಾಲ್  ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಹನುಮ ವಿಹಾರಿ ಜೊತೆಗೆ ಆಟವಾಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1 ಅಂಕಗಳಿಂದ ಸಮಬಲ ಹೊಂದಿದ್ದು, ಮೆಲ್ಬರ್ನ್ ಮೈದಾನದಲ್ಲಿ ಸುಮಾರು 90 ಸಾವಿರ ಕ್ರಿಕೆಟ್ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಟೀಂ ಇಂಡಿಯಾ ಆಟಗಾರರ ವಿವರ ಇಂತಿದೆ.  ವಿರಾಟ್ ಕೊಹ್ಲಿ ( ನಾಯಕ) ಅಜಿಂಕ್ಯಾ ರಹಾನೆ ( ಉಪನಾಯಕ) ಮಾಯಾಂಕ್ ಅಗರ್ ವಾಲ್, ಹನುಮ ವಿಹಾರಿ,  ಚೇತೇಶ್ವರ್ ಪೂಜಾರಿ,  ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್ ) ರವೀಂದ್ರ ಜಡೇಜಾ,  ಮೊಹಮ್ಮದ್ ಶಮಿ,  ಇಶಾಂತ್ ಶರ್ಮಾ, ಜಸ್ಪ್ರೀತ್ ಬ್ರೂಮಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.