ಬಾಲ್ಯದ ಗೆಳತಿ ಚಾರುಲತಾ ವರಿಸಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್
ಟೀಂ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

Published On :
ಕೊಚ್ಚಿ: ಟೀಂ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ಸಂಜು ತಮ್ಮ ದೀರ್ಘ ಕಾಲದ ಪ್ರೇಯಸಿ ಹಾಗೂ ಕಾಲೇಜು ಗೆಳತಿ ಚಾರುಲತಾ ಅವರನ್ನು ಡಿಸೆಂಬರ್ 22 ಶನಿವಾರದಂದು ವರಿಸಿದ್ದಾರೆ ಎಂದು ತಿಳಿದುಬಂದಿದೆ. ತವರೂರು ಕೇರಳದ ಕೋವಳಂ ರಿಸಾರ್ಟ್‌ನಲ್ಲಿ ಸರಳ ಸಮಾರಂಭದಲ್ಲಿ ಸಂಜು, ಗೆಳತಿ ಚಾರುಲತಾ ವರಿಸುವ ಮೂಲಕ ಜೀವನದಲ್ಲೂ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ ಗುರು ರಾಹುಲ್ ದ್ರಾವಿಡ್ ಸಹ ಭಾಗವಹಿಸಿರುವುದು ವಿಶೇಷವೆನಿಸಿತ್ತು. ಸಂಜು ಬೆಳವಣಿಗೆಯಲ್ಲಿ ದ್ರಾವಿಡ್ ಮಹತ್ವದ ಪಾತ್ರ ವಹಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಂಜು, ಭಾರತೀಯ ಕ್ರಿಕೆಟ್ ತಂಡದ ಬಾಗಿಲು ನಿರಂತರ ತಟ್ಟುತ್ತಲೇ ಇದ್ದಾರೆ.
24ರ ಹರೆಯದ ಸಂಜು, 2015 ಜುಲೈ 19ರಂದು ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಏಕಮಾತ್ರ ಪಂದ್ಯದಲ್ಲಿ ಸಂಜು 19 ರನ್ ಗಳಿಸಿದ್ದರು. 2014ರಲ್ಲಿ ಇಂಗ್ಲೆಂಡ್ ಏಕದಿನ ಸರಣಿಗೂ ಆಯ್ಕೆಯಾಗಿದ್ದರೂ ಆಡುವ ಅವಕಾಶ ದೊರಕಿರಲಿಲ್ಲ. 2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 1000 ರನ್ ಗಳಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಅಷ್ಟೇ ಯಾಕೆ ರಣಜಿ ತಂಡವನ್ನು ಮುನ್ನಡೆಸಿದ ಅತಿ ಕಿರಿಯ ಕಪ್ತಾನ ಎಂಬ ದಾಖಲೆಯೂ ಸಂಜು ಹೆಸರಲ್ಲಿದೆ.
ಇನ್ನು ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸಂಜು ಬರೆದಿದ್ದರು. 2013ರಲ್ಲಿ ಐಪಿಎಲ್ ನ ಬೆಸ್ಟ್ ಯಂಗ್ ಪ್ಲೇಯರ್ ಪ್ರಶಸ್ತಿಗೂ ಸಂಜು ಭಾಜನವಾಗಿದ್ದರು. ಮನೀಶ್ ಪಾಂಡೆ ಬಳಿಕ ಐಪಿಎಲ್‌ನಲ್ಲಿ ಶತಕ ಬಾರಿಸಿದ ಎರಡನೇ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಗೂ ಪಾತ್ರವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


