ಕೋಹ್ಲಿ ಆಕ್ರಮಣಶೀಲ ವರ್ತನೆ ಸಮರ್ಥಿಸಿಕೊಂಡ ಆಸ್ಟ್ರೇಲಿಯಾ ಮಾಜಿ ನಾಯಕ ಹೇಳಿದ್ದೇನು?
ಆನ್ ಫೀಲ್ಡ್ ನಲ್ಲಿ ಆಕ್ರಮಣಶೀಲತೆ ತೋರುವ ವಿರಾಟ್ ಕೊಹ್ಲಿ ವಿರುದ್ಧ ಅನೇಕ ಬಾರಿ ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಕೋಹ್ಲಿ ಆಕ್ರಮಣಶೀಲ

Published On :
ಆನ್ ಫೀಲ್ಡ್ ನಲ್ಲಿ ಆಕ್ರಮಣಶೀಲತೆ ತೋರುವ ವಿರಾಟ್ ಕೊಹ್ಲಿ ವಿರುದ್ಧ ಅನೇಕ ಬಾರಿ ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಕೋಹ್ಲಿ ಆಕ್ರಮಣಶೀಲ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಕೋಹ್ಲಿಯಂತಹ ವ್ಯಕ್ತಿತ್ವದ ಅಗತ್ಯವಿದೆ, ಅವರ ಆಕ್ರಮಣಶೀಲ ಮನೋಭಾವನೆ ಆನ್ ಫೀಲ್ಡ್ ನಲ್ಲಿ ಅಗತ್ಯವಿದೆ. ಈಗ ನಮ್ಮ ಕ್ರೀಡೆಯಲ್ಲಿ ಈ ರೀತಿಯ ಮನೋಭಾವನೆಯುಳ್ಳವರಿಲ್ಲ, ಆದರೆ ಕೊಹ್ಲಿಯಂತಹ ಆಕ್ರಮಣಶೀಲ ವರ್ತನೆ ಹೊಂದಿರುವ ಆಟಗಾರರು ಅಗತ್ಯ ಎಂದು ಬಾರ್ಡರ್ ಸಮರ್ಥಿಸಿಕೊಂದಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆನ್ ಫೀಲ್ಡ್ ನಲ್ಲಿ ಆಕ್ರಮಣಶೀಲ ಮನೋಭಾವನೆ ಪ್ರದರ್ಶಿಸಿದ್ದಕ್ಕಾಗಿ ಸಂಜಯ್ ಮಂಜ್ರೇಕರ್, ಮೈಕ್ ಹಸ್ಸಿ, ಮಿಚೆಲ್ ಜಾನ್ಸನ್ ಅವರಿಂದ ಟೀಕೆಗೊಳಗಾಗಿದ್ದರು. 2 ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಜೊತೆಗೂ ವಿರಾಟ್ ಕೊಹ್ಲಿ ವಾಗ್ವಾದಕ್ಕಿಳಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


