ಅಂಕಿ ಅಂಶ: ಟಾಸ್ ನಲ್ಲೂ ವಿರಾಟ್ ಕೊಹ್ಲಿಯೇ ಬಾಸ್!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಆಸಿಸ್ ನೆಲದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಗೈದಿದೆ. ಅಂತೆಯೇ ನಾಯಕ ವಿರಾಟ್ ಕೊಹ್ಲಿಯ ಟಾಸ್ ಗೆದ್ದ ಪಂದ್ಯಗಳಲ್ಲಿ ಅಜೇಯ ಯಾತ್ರೆಯೂ ಮುಂದುವರೆದಿದೆ.

Published On :
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಆಸಿಸ್ ನೆಲದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಗೈದಿದೆ. ಅಂತೆಯೇ ನಾಯಕ ವಿರಾಟ್ ಕೊಹ್ಲಿಯ ಟಾಸ್ ಗೆದ್ದ ಪಂದ್ಯಗಳಲ್ಲಿ ಅಜೇಯ ಯಾತ್ರೆಯೂ ಮುಂದುವರೆದಿದೆ.
ಹೌದು... ಟೆಸ್ಟ್ ಪಂದ್ಯದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆಯಾದ ಬಳಿಕ ಅವರು ಟಾಸ್ ಗೆದ್ದ ಪಂದ್ಯಗಳಲ್ಲಿ ಭಾರತ ಸೋತೇ ಇಲ್ಲ. ವಿರಾಟ್ ಕೊಹ್ಲಿ ಈ ವರೆಗೂ ನಾಯಕರಾಗಿ 20 ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, ಈ ಪೈಕಿ ಅಡಿಲೇಡ್ ಪಂದ್ಯವೂ ಸೇರಿದಂತೆ 17 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಉಳಿದ ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ಆ ಮೂಲಕ ಟಾಸ್ ಗೆದ್ದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ ಯಾತ್ರೆ ಮುಂದುವರೆದಿದೆ.
ಆಸಿಸ್ ನೆಲದಲ್ಲಿ ಸರಣಿಯ ಮೊದಲ ಪಂದ್ಯದಲ್ಲೇ ಕಾಂಗರೂಗಳ ಬಗ್ಗು ಬಡಿದ ಎರಡನೇ ತಂಡ ಭಾರತ
ಇನ್ನು ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಎರಡನೇ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಭಾಜನವಾಗಿದೆ. ಈ ಹಿಂದೆ ಅಂದರೆ 1978/79ರಲ್ಲಿ ಪಾಕಿಸ್ತಾನ ತಂಡ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೂ ಭಾಜನವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirat Kohliವಿರಾಟ್ ಕೊಹ್ಲಿAdelaideಅಡಿಲೇಡ್Cricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


