ಅಡಿಲೇಡ್ ಟೆಸ್ಟ್: ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್
ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

Published On :
ಅಡಿಲೇಡ್: ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಚ್ ಪಂದ್ಯದಲ್ಲಿ ರಿಷಬ್ ಪಂತ್ ಒಟ್ಟು 11 ಕ್ಯಾಚ್ ಗಳನ್ನು ಪಡೆದಿದ್ದು, ಆ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ 3ನೇ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ.
ಈ ಮೂಲಕ 2013 ರಲ್ಲಿ ದಕ್ಷಿಣ ಆಫ್ರಿಕಾ ಕೀಪರ್ ಎಬಿ ಡಿ ವಿಲಿಯರ್ಸ್ ಪಾಕಿಸ್ತಾನದ ವಿರುದ್ಧ ಹಾಗೂ 2013ರಲ್ಲಿ ಇಂಗ್ಲೆಂಡ್ ಆಟಗಾರ ಜಾಕ್ ರಸೆಲ್ ಆಫ್ರಿಕಾ ವಿರುದ್ಧ 11 ಕ್ಯಾಚ್ ಪಡೆದ ವಿಶ್ವದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ರಿಷಬ್ ಪಂತ್ ಭಾರತದ ಪರ ಧೋನಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಪಡೆದಿದ್ದರು.
ಭಾರತದ ಪರ ಪಂದ್ಯವೊಂದರಲ್ಲಿ ವೃದ್ಧಿಮಾನ್ ಸಹಾ 10 ಕ್ಯಾಚ್ ಪಡೆದಿದ್ದರೆ, ಧೋನಿ 9 ಕ್ಯಾಚ್ ಪಡೆದಿದ್ದಾರೆ. ವೃದ್ಧಿಮಾನ್ ಸಹಾ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಟೆಸ್ಟ್ ನಲ್ಲಿ 9 ಕ್ಯಾಚ್ ಪಡೆದಿದ್ದರು.
ಆಸಿಸ್ ನೆಲದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಶ್ವದ ಮೊದಲ ವಿದೇಶಿ ವಿಕೆಟ್ ಕೀಪರ್
ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದ ಪಂತ್ ಈ ಪಂದ್ಯದಲ್ಲಿ 11 ಕ್ಯಾಚ್ ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಅತೀ ಹೆಚ್ಚು ಕ್ಯಾಚ್ ಗಳನ್ನು ಪಡೆದ ಮೊದಲ ವಿದೇಶಿ ವಿಕೆಟ್ ಕೀಪರ್ ಎಂಬ ಕೀರ್ತಿಗೂ ಭಾಜನರಾದರು. ಪಂತ್ ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaRecordದಾಖಲೆAdelaideಅಡಿಲೇಡ್Rishabh PantCricket Offbeatಕ್ರಿಕೆಟ್ ಸ್ವಾರಸ್ಯರಿಷಬ್ ಪಂತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


