ಕ್ರಿಕೆಟ್

ನುಚ್ಚು ನೂರಾಯ್ತು ಕಾಂಗರೂಗಳ 116 ವರ್ಷಗಳ ದಾಖಲೆ ಮುರಿಯುವ ಕನಸು

ಓವಲ್ ಮೈದಾನದಲ್ಲಿ ಭಾರತದ ಎದುರು ಟೆಸ್ಟ್ ಪಂದ್ಯ ಸೋಲುವ ಮೂಲಕ ಕಾಂಗರೂಗಳ 116 ವರ್ಷಗಳ ದಾಖಲೆ ಮುರಿಯುವ ಕನಸು ಕೂಡ ನುಚ್ಚು ನೂರಾಗಿದೆ.

ನುಚ್ಚು ನೂರಾಯ್ತು ಕಾಂಗರೂಗಳ 116 ವರ್ಷಗಳ ದಾಖಲೆ ಮುರಿಯುವ ಕನಸು
ಸಂಗ್ರಹ ಚಿತ್ರ
Published On :
ಅಡಿಲೇಡ್: ಓವಲ್ ಮೈದಾನದಲ್ಲಿ ಭಾರತದ ಎದುರು ಟೆಸ್ಟ್ ಪಂದ್ಯ ಸೋಲುವ ಮೂಲಕ ಕಾಂಗರೂಗಳ 116 ವರ್ಷಗಳ ದಾಖಲೆ ಮುರಿಯುವ ಕನಸು ಕೂಡ ನುಚ್ಚು ನೂರಾಗಿದೆ.
ಹೌದು.. ಮೊದಲ ಟೆಸ್ಟ್ ಪಂದ್ಯ ನಡೆದ ಅಡಿಲೇಡ್ ಓವಲ್ ಪಿಚ್ ನಲ್ಲಿ ಆಸ್ಟ್ರೇಲಿಯಾ ತಂಡ ಕಳೆದ 11 ವರ್ಷಗಳಿಂದೀಚೆಗೆ 250ಕ್ಕೂ ಅಧಿಕ ರನ್ ಗಳ ಗುರಿಯನ್ನು ಮುಟ್ಟಿಲ್ಲ. ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಬಳಗಕ್ಕೆ ಈ ಸುವರ್ಣಾವಕಾಶ ಲಭಿಸಿತ್ತಾದರೂ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕಾಂಗರೂಗಳ ಕನಸು ನುಚ್ಚುನೂರಾಗಿದೆ.
ಅಡಿಲೇಡ್ ಅಂಗಳದಲ್ಲಿ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಅತ್ಯಧಿಕ ಚೇಸಿಂಗ್ ದಾಖಲಾಗಿದ್ದು 1902ರಲ್ಲಿ. 300ಕ್ಕೂ ಅಧಿಕ ಟಾರ್ಗೆಟ್ ಚೇಸ್ ಅನ್ನು 6 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯ ಚೇಸ್ ಮಾಡಿತ್ತು. 1982ರಲ್ಲಿ 239 ರನ್ ಅಡಿಲೇಡ್ ನಲ್ಲಿ ಯಶಸ್ವಿಯಾಗಿ ಚೇಸ್ ಆಗಿತ್ತು. ಇವೆರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ಗೆಲುವಿನ ನಗೆ ಬೀರಿತ್ತು. ಇವೆರಡೂ ಸಂದರ್ಭದಲ್ಲಿ ಇಂಗ್ಲೆಂಡ್ ಸೋಲನುಭವಿಸಿತ್ತು. 
ಆದರೀಗ ಮತ್ತದೇ ಇತಿಹಾಸ ಮರುಕಳಿಸಿದ್ದು ಭಾರತದ ವಿರುದ್ಧ ಮತ್ತೆ ಆಸ್ಚ್ರೇಲಿಯಾ 31 ರನ್ ಗಳ ಅಂತರದಲ್ಲಿ ಮಂಡಿಯೂರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.